ಬೆಂಗಳೂರು: ಎಚ್ ಎಎಲ್ ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಪ್ರೀಮಿಯರ್ 1ಎ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಭಾರೀ ವಿಮಾನ ದುರಂತವೊಂದು ತಪ್ಪಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Bantval: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಪ್ಯಾಕ್ಟರಿಗೆ ಬೆಂಕಿ; ಅಪಾರ ನಷ್ಟ
ಎಚ್ ಎಎಲ್ ನ ರನ್ ವೇಗೆ ಇಳಿದ ವಿಮಾನ ಸ್ವಲ್ಪ ದೂರ ಚಲಿಸುತ್ತಲೇ ವಿಮಾನದ ಮುಂಭಾಗ ಅಪ್ಪಳಿಸಿದ್ದು, ಅದೇ ಸ್ಥಿತಿಯಲ್ಲಿ ವಿಮಾನ ಚಲಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ವೇಳೆ ವಿಮಾನದಲ್ಲಿ ಇಬ್ಬರು ಪೈಲಟ್ ಗಳು ಮಾತ್ರ ಇದ್ದಿದ್ದು, ಪ್ರಯಾಣಿಕರು ಇಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
ಪ್ರೀಮಿಯರ್ 1ಎ ವಿಮಾನವನ್ನು ಸುರಕ್ಷಿತವಾಗಿ Nose gear ಮೂಲಕ ಲ್ಯಾಂಡ್ ಮಾಡಿರುವ ಸಂದರ್ಭದಲ್ಲಿ ವಿಮಾನ ಮಗುಚಿ ಬೀಳುವಂತೆ ಚಲಿಸಿತ್ತ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಡಿಜಿಸಿಎ ತಿಳಿಸಿದೆ.
ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣದಲ್ಲಿ ಈ ರೀತಿ Airturnback ತುರ್ತು ಲ್ಯಾಂಡಿಂಗ್ ಮಾಡಲಾಗುತ್ತದೆ. ಬಹುತೇಕ ಎಂಜಿನ್ ವೈಫಲ್ಯ ಕಂಡಾಗ ತುರ್ತು ಭೂಸ್ಪರ್ಶ ಮಾಡುವುದು ಸಾಮಾನ್ಯ ಕ್ರಮವಾಗಿದೆ ಎಂದು ವರದಿ ತಿಳಿಸಿದೆ.