ಬಹುಭಾಷಾ ಸಿನೆಮಾದಲ್ಲಿ ಉಡುಪಿಯ ಐರಾ ಆಚಾರ್ಯ ಹಾಡಿರುವ “ಜೋಕೆ ನಾನು ಬಳ್ಳಿಯ
ಮಿಂಚು’ ಹಾಡನ್ನು ಸಿನೆಮಾ ಬಿಡುಗಡೆಯಾಗುವ ಮೊದಲೇ ಯೂಟ್ಯೂಬ್‌ನಲ್ಲಿ 1.8 ಮಿಲಿಯ ಮಂದಿ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಈ ಚಿತ್ರಕ್ಕೆ ರವಿ ಬಸೂರು ಅವರ ಸಂಗೀತವಿದ್ದು 1970ರ ದಶಕದಲ್ಲಿ ಡಾ| ರಾಜ್‌ಕುಮಾರ್ ಅಭಿನಯಿಸಿದ್ದ “ಪರೋಪಕಾರಿ’ ಚಿತ್ರದಲ್ಲಿ ಎಲ್.ಆರ್. ಈಶ್ವರಿ ಈ ಹಾಡನ್ನು ಹಾಡಿದ್ದರು. ಇದೀಗ ಐರಾ ಆಚಾರ್ಯ ಅವರು “ಕೆಜಿಎಫ್’ನಲ್ಲಿ ವಿಭಿನ್ನ ಶೈಲಿಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಈ ಸಿನೆಮಾ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳಿಗೂ ಡಬ್ ಆಗಿದ್ದು ಐರಾ ಅವರೇ ಹಿನ್ನೆಲೆ ಗಾಯನ ನೀಡಿದ್ದಾರೆ.
ಸಿರುವ ಐರಾ ಪ್ರಸ್ತುತ ಉಡುಪಿಯ ಪ್ರಸಿದ್ಧ ಹಿಂದೂಸ್ತಾನಿ ಶೈಲಿಯ ಸಂಗೀತ ವಿದ್ವಾಂಸ ಪಂಡಿತ ವಿಟuಲದಾಸ ಭಟ್ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ನಡೆಸುತ್ತಿದ್ದು ವಿದ್ವತ್ ಶ್ರೇಣಿ ಪೂರೈಸಿದ್ದಾರೆ. ನಿತ್ಯ 4 ಗಂಟೆಗಳ ಕಾಲ ಸಂಗೀತಾಭ್ಯಾಸ ನಡೆಸುತ್ತಾರೆ. ಈಕೆ ಉಡುಪಿ ಎಂಜಿಎಂ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ. “ನಮ್ಮ ಟಿವಿ’ಯವರು ಆಯೋಜಿಸಿದ್ದ ಕರ್ನಾಟಕ ಕರಾವಳಿಯ ಅತೀದೊಡ್ಡ ಸಂಗೀತದ ರಿಯಾಲಿಟಿ ಶೋ “ನಮ್ಮ ಸೂಪರ್ ಸಿಂಗರ್’ನಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದ ಐರಾ “ವಾಯ್ಸ ಆಫ್ ಉಡುಪಿ’ ಸಂಗೀತ ರಿಯಾಲಿಟಿ ಶೋನಲ್ಲಿಯೂ ಪ್ರಥಮ ಸ್ಥಾನಿಯಾಗಿದ್ದರು. ಐರಾ ಅವರ ಹಾಡನ್ನು ಕೇಳಿದ ಬಾಲಿವುಡ್ ಸಂಗೀತ ನಿರ್ದೇಶಕರಿಂದಲೂ ಕರೆ ಬಂದಿವೆ ಎಂದು ಐರಾ ತಂದೆ ವೃಜನಾಥ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಾಯಿ, ವಿದುಷಿ ಚೇತನಾ ಆಚಾರ್ಯ, ಐರಾ ಆಚಾರ್ಯ ಉಪಸ್ಥಿತರಿದ್ದರು.