Advertisement

ಯೆಮೆನ್‌ : ವೈಮಾನಿಕ ದಾಳಿಯಲ್ಲಿ 16 ಹುತಿ ಬಂಡುಕೋರರ ಸಾವು

05:31 PM Apr 02, 2018 | Team Udayavani |

ಏಡನ್‌ : ಹುತಿ ಬಂಡುಕೋರರು ಜಮಾಯಿಸುತ್ತಿದ್ದ ಯೆಮೆನ್‌ನ ಹೊಡೈಡಾ ಬಂದರು ಸಮೀಪದ ಕಟ್ಟಡವೊಂದರ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ 16 ಮಂದಿ ಮೃತಪಟ್ಟಿರುವುದಾಗಿ ಭದ್ರತಾ ಮೂಲಗಳನ್ನು ಉಲ್ಲೇಖೀಸಿ AFP ವರದಿ ಮಾಡಿದೆ. 

Advertisement

 ಸೌದಿ ನೇತೃತ್ವದ ಮೈತ್ರಿ ಪಡೆಗಳು ನಡೆಸಿರುವ ಈ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವ ಬಂಡುಕೋರರು ಎಷ್ಟು, ಪೌರರು ಎಷ್ಟು ಎನ್ನುವ ಬಗ್ಗೆ ವ್ಯತಿರಿಕ್ತ ವರದಿಗಳು ಬಂದಿವೆ. 

ಈ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಮೈತ್ರಿ ಪಡೆ ಹೇಳಿದ್ದು ಸದ್ಯಕ್ಕೆ ಯಾವುದೇ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next