Advertisement

ದೆಹಲಿ ಮಾಲಿನ್ಯದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ

07:20 AM Nov 17, 2017 | Team Udayavani |

ನವದೆಹಲಿ: ದೆಹಲಿ ವಾಯುಮಾಲಿನ್ಯದಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡಿದ್ದು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಹೇರಿದ್ದ ನಿಷೇಧ ಹಿಂಪಡೆಯಲಾಗಿದೆ. ವಾಯುಮಾಲಿನ್ಯವು ತುರ್ತು ಪರಿಸ್ಥಿತಿ ಸನ್ನಿವೇಶಕ್ಕಿಂತ ಕೆಳಕ್ಕೆ ಇಳಿದಿದೆ. 

Advertisement

ಟ್ರಕ್‌ಗಳಿಗೆ ನಗರ ಪ್ರವೇಶ ನಿಷೇಧ ಹಾಗೂ ಪಾರ್ಕಿಂಗ್‌ ಶುಲ್ಕ ಹೆಚ್ಚಳ ನಿರ್ಧಾರವನ್ನೂ ಹಿಂಪಡೆಯಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ ನೇತೃತ್ವದ ಸಮಿತಿ ಆದೇಶ ಹೊರಡಿಸಿದೆ.
ಕೃಷಿ ತ್ಯಾಜ್ಯ ಖರೀದಿಗೆ ನಿರ್ಧಾರ: ಮಾಲಿನ್ಯಕ್ಕೆ ಕಾರಣವಾಗುವ ಕೃಷಿ ತ್ಯಾಜ್ಯ ಸುಡುವುದನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯ ಖರೀದಿಸಿ ತನ್ನ ವಿದ್ಯುತ್‌ ಘಟಕದಲ್ಲಿ ಉರುವಲಾಗಿ ಬಳಸಲು ಎನ್‌ಟಿಪಿಸಿ ನಿರ್ಧರಿಸಿದೆ. ಈ ಸಂಬಂಧ ಶೀಘ್ರದಲ್ಲೇ ಟೆಂಡರ್‌ ಕರೆಯುವುದಾಗಿ ಇಂಧನ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ. ಟನ್‌ಗೆ 5,500 ರೂ. ದರದಲ್ಲಿ ಕೃಷಿ ತ್ಯಾಜ್ಯ ಖರೀದಿಸಲಿದೆ. 

ಕೋಸ್ಟರಿಕಾ ರಾಯಭಾರಿಗೆ ಬೆಂಗಳೂರ‌ಲ್ಲಿ ಚಿಕಿತ್ಸೆ: ದೆಹಲಿ ಮಾಲಿನ್ಯದಿಂದಾಗಿ ಅಸ್ವಸ್ಥಗೊಂಡ ಕೋಸ್ಟರಿಕಾ ರಾಯಭಾರಿ ಮಾರಿಯೆಲಾ ಕ್ರೂಜ್‌ ಅಲ್ವರೆಜ್‌ ಬೆಂಗಳೂರ‌ಲ್ಲಿ ಚಿಕಿತ್ಸೆ ಪಡೆದಿ ದ್ದಾರೆ. ಈ ಬಗ್ಗೆ ಅವರು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next