Advertisement
ಉಡುಪಿ ಆರ್‌ಟಿಒ ಕಚೇರಿಯಲ್ಲಿ 4.5 ಲಕ್ಷ ವಿವಿಧ ವಾಹನಗಳು ನೋಂದಣಿಯಾಗಿವೆ. ನಿತ್ಯ ಉಡುಪಿ ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ದ್ವಿಚಕ್ರ, ಬಸ್, ಆಟೋ ಸಹಿತ ವಿವಿಧ ವಾಹನಗಳು ಸಂಚರಿಸುತ್ತವೆ. ಜಿಲ್ಲೆಯಲ್ಲಿ ಒಂದು ತಿಂಗಳಿನಿಂದ ಕಟ್ಟುನಿಟ್ಟಾಗಿ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಪರಿಸರದಲ್ಲಿ ಮಾಲಿನ್ಯಕಾರಕ ಅಂಶಗಳು ಕಡಿಮೆಯಾಗಿವೆ.
ಕೈಗಾರಿಕೀಕರಣ, ರಸ್ತೆಯ ಧೂಳು, ರಸ್ತೆ ನಿರ್ಮಾಣ ಹಾಗೂ ಕಟ್ಟಡ ಕಾಮಗಾರಿ, ವಾಹನಗಳು ಹೊರಹೊಮ್ಮುವ ಹೊಗೆ ಯಲ್ಲಿರುವ ಇಂಗಾಲದ ಮೊನಾಕ್ಸೆ„ಡ್ ಹಾಗೂ ಗಂಧಕದ ಡೈ ಆಕ್ಸೆ„ಡ್‌ಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳಾಗಿವೆ. ಈ ಮಾಲಿನ್ಯಕಾರಕ ಅಂಶಗಳು ನಿಗದಿತ ಮಟ್ಟಕ್ಕಿಂತ ಹೆಚ್ಚಾಗುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Related Articles
ನಗರದಲ್ಲಿ ಕಾರ್ಯಾಚರಿಸುತ್ತಿರುವ ವಾಯು ಗುಣಮಟ್ಟ ಮಾಪನ ಕೇಂದ್ರದ ವರದಿ ಪ್ರಕಾರ ಪ್ರಸ್ತುತ ಉಡುಪಿ ನಗರದಲ್ಲಿ 2.5 ಎಂ.ಜಿ. ಕಣಗಳು 2.00 ಎಂಜಿಯಷ್ಟಿದ್ದರೆ, 10 ಎಂ.ಜಿ. ಕಣಗಳು 10-15 ಎಂ.ಜಿ.ಯಷ್ಟಿದೆ. ಲಾಕ್‌ಡೌನ್‌ಗಿಂತ ಮೊದಲು ಮಾ. 1ರಂದು 10 ಎಂ.ಜಿ. ಕಣಗಳು ಶೇ. 77.18ರಷ್ಟು ಪ್ರಮಾಣದಲ್ಲಿ ಇದ್ದವು. ಮಾ. 5ರಂದು 2.5 ಎಂ.ಜಿ. ಧೂಳಿನ ಕಣಗಳು 56 ಎಂ.ಜಿ.ಯಷ್ಟು ಇಳಿಕೆಯಾಗಿತ್ತು. ಪ್ರಸ್ತುತ ಕೇವಲ 2 ಎಂ.ಜಿ.ಗೆ ಇಳಿದಿರುವುದು ನಗರದ ವಾತಾವರಣ ಸುರಕ್ಷಿತ ಎಂಬುದನ್ನು ಬಿಂಬಿಸುತ್ತದೆ.
Advertisement
ಮಿತಿ ಮೀರಿದರೆ ಅಪಾಯವಾಹನಗಳ ಹೊಗೆಯಿಂದ ಬರುವ ಇಂಗಾಲದ ಮೊನಾಕ್ಸೆ„ಡ್ ಪ್ರಮಾಣ 2 ಎಂ.ಜಿ. ಮಿತಿಗಿಂತ ಮೀರಿದರೆ ಪರಿಸರ ಮಲಿನವಾಗಿರುತ್ತದೆ. ಪ್ರಸ್ತುತ ಉಡುಪಿ ನಗರದಲ್ಲಿ ಇಂಗಾಲದ ಮೊನಾಕ್ಸೆ„ಡ್ 0.548 ಎಂ.ಜಿ.ನಷ್ಟಿದ್ದರೆ ಲಾಕ್‌ಡೌನ್‌ಗೆ ಮೊದಲು ವಾಹನ ದಟ್ಟಣೆೆ ಹೆಚ್ಚಿದ್ದಾಗ 2 ಎಂ.ಜಿ. ಮಿತಿಯನ್ನು ಮೀರಿದೆ. ಗಾಳಿಯಲ್ಲಿ ಗಂಧಕದ ಡೈ ಆಕ್ಸೆ„ಡ್‌ನ ಪ್ರಮಾಣ 12 ಯುಜಿಎಂ (ಆಲ್ಟ್ರಾಮಿಲಿ ಗ್ರಾಂ) ಮಿತಿಗಿಂತ ಮೀರಿದರೆ ಅಪಾಯಕಾರಿ. ಆದರೆ ನಗರದಲ್ಲಿ ಈ ಪ್ರಮಾಣ ತಲುಪಿಲ್ಲ. ಸದ್ಯ ಇದರ ಪ್ರಮಾಣ 8.412 ಯುಜಿಎಂನಷ್ಟಿದೆ. ವಾಹನಗಳ ಹೊಗೆಯಿಂದ ಬರುವ ಇಂಗಾಲದ ಮೊನಾಕ್ಸೆ„ಡ್ ಪ್ರಮಾಣ 2 ಎಂ.ಜಿ. ಮಿತಿಗಿಂತ ಮೀರಿದರೆ ಪರಿಸರ ಮಲಿನವಾಗಿರುತ್ತದೆ. ಪ್ರಸ್ತುತ ಉಡುಪಿ ನಗರದಲ್ಲಿ ಇಂಗಾಲದ ಮೊನಾಕ್ಸೆ„ಡ್ 0.548 ಎಂಜಿ.ನಷ್ಟಿದೆ ಎಂದು ಕೇಂದ್ರದ ಸಿಬಂದಿ ಮಾಹಿತಿ ನೀಡಿದರು. ವಾಯುಮಾಲಿನ್ಯ ಇಳಿಕೆ
ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ವಾಹನಗಳ ಓಡಾಟದಿಂದ ರಸ್ತೆಯಲ್ಲಿನ ಹೊಗೆಯ ಹಾಗೂ ಧೂಳಿನ ಕಣಗಳು ವಾತಾವರಣವನ್ನು ಸೇರಿಕೊಳ್ಳುತ್ತವೆ. ಇದು ಮನುಷ್ಯನಿಗೆ ಅಸ್ತಮಾ, ಶ್ವಾಸಕೋಸಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈಗ ವಾಹನಗಳ ಓಡಾಟ ಇಲ್ಲದ ಕಾರಣ ಧೂಳಿನ ಕಣಗಳ ಸಾಂದÅತೆ ಹಾಗೂ ಇಂಗಾಲದ ಮೊನಾಕ್ಸೆ„ಡ್ ಪ್ರಮಾಣ ಸಾಕಷ್ಟು ಇಳಿಕೆ ಆಗಿದೆ.
– ವಿಜಯ ಹೆಗ್ಡೆ,
ಜಿಲ್ಲಾ ಪರಿಸರ ಅಧಿಕಾರಿ