Advertisement
ಅ.30ರಂದು ದೀಪಾವಳಿ ಆರಂಭವಾಗಲಿದ್ದು, ಪಟಾಕಿ ಹಚ್ಚುವಿಕೆ ಸಹ ಸೇರ್ಪಡೆಯಾಗಿ ಅ.30ರ ವೇಳೆಗೆ ಮಾಲಿನ್ಯ ಗಂಭೀರ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾ ಗಿದೆ. ಇದಲ್ಲದೇ ದಿಲ್ಲಿಯಲ್ಲಿನ ಹವಾ ಮಾನ ಪರಿಸ್ಥಿತಿಯೂ ಪ್ರತಿಕೂಲವಾ ಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ದಿಲ್ಲಿ ನಿವಾಸಿಗಳಿಗೆ ಮುಂಜಾಗ್ರತ ಕ್ರಮಗ ಳನ್ನು ಕೈಗೊಳ್ಳಲು ಸಲಹೆ ನೀಡಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ದಿಲ್ಲಿ ಭಾಗದಲ್ಲಿ ಪಟಾಕಿ ಹಚ್ಚುವವರ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಶೇ.18ರಷ್ಟು ಮಂದಿ ಹಬ್ಬದ ವೇಳೆ ಪಟಾಕಿ ಹಚ್ಚುವುದಾಗಿ ಹೇಳಿದ್ದಾರೆ. ಶೇ.9 ರಷ್ಟು ಮಂದಿ ಹೇಗಾದರೂ ಪಟಾಕಿ ಹಚ್ಚಿಯೇ ಹಚ್ಚುವುದಾಗಿ ಹೇಳಿದ್ದಾರೆ. ಇನ್ನು ಶೇ.8ರಷ್ಟು ಮಂದಿ ಉತ್ತರ ನೀಡಿಲ್ಲ. ಶೇ.55 ರಷ್ಟು ಮಂದಿ ಪಟಾಕಿ ಹಚ್ಚುವುದಿಲ್ಲ ಎಂದಿದ್ದಾರೆ. ಒಟ್ಟು 10,526 ಮಂದಿಯನ್ನೊಳಗೊಂಡಂತೆ ಈ ಸಮೀಕ್ಷೆ ನಡೆಸಲಾಗಿದೆ.