Advertisement

ಐಎಎಫ್ ಏರ್‌ ಮಾರ್ಶಲ್‌ ನಿವೃತ್ತಿ: ಉಚ್ಚಾಟನೆ ಎಂದ ಪಾಕ್‌ ಮಾಧ್ಯಮ

07:11 AM Mar 02, 2019 | udayavani editorial |

ಹೊಸದಿಲ್ಲಿ : ಭಾರತದ ವಿರುದ್ಧ ಪಾಕ್‌ ಮಾಧ್ಯಮಗಳು ಸುಳ್ಳು  ಸುಳ್ಳನ್ನೇ ವರದಿ ಮಾಡುತ್ತಿರುವುದಕ್ಕೆ ಹಲವಾರು ನಿದರ್ಶನಗಳು ಈಚಿನ ದಿನಗಳಲ್ಲಿ ಸಿಕ್ಕಿವೆ. ಈ ಸರಣಿಯಲ್ಲಿ  ಹೊಸ ನಿದರ್ಶನವಾಗಿ ಕಳೆದ ಫೆ.28ರಂದು 39 ವರ್ಷಗಳ ಸುದೀರ್ಘ‌ ಸೇವೆಯ ಬಳಿಕ ನಿವೃತ್ತರಾಗಿದ್ದ ಭಾರತೀಯ ವಾಯು ಪಡೆಯ ಏರ್‌ ಮಾರ್ಶಲ್‌ ಚಂದ್ರಶೇಖರನ್‌ ಹರಿ ಕುಮಾರ್‌ ಅವರನ್ನು ಭಾರತ ಸರಕಾರ ಸೇವೆಯಿಂದ ಉಚ್ಚಾಟಿಸಿದೆ ಎಂಬ ಸುಳ್ಳು ವರದಿಯನ್ನು ಪಾಕ್‌ ಮಾಧ್ಯಮಗಳು ಪ್ರಕಟಿಸಿದವು; ಅನಂತರ ಸತ್ಯಾಂಶ ತಿಳಿದ ಪಾಕ್‌ ಮಾಧ್ಯಮಗಳು ಇಂಗು ತಿಂದು ಮಂಗನಂತಾದವು.

Advertisement

”ಪಾಕ್‌ ವಾಯು ದಾಳಿಗೆ ನಲುಗಿ  ಭಾರತ ತನ್ನ 2 ಫೈಟರ್‌ ಜೆಟ್‌ ಗಳನ್ನು ಕಳೆದುಕೊಂಡು ಓರ್ವ ಪೈಲಟ್‌ ಸೆರೆಯಾಗಿರುವುದಕ್ಕಾಗಿ ಭಾರತ ಸರಕಾರ ಏರ್‌ ಮಾರ್ಶಲ್‌ ಹರಿ ಕುಮಾರ್‌ ಅವರನ್ನು  ಉಚ್ಚಾಟಿಸಿದೆ” ಎಂದು ಪಾಕಿಸ್ಥಾನದ “ದ ನ್ಯೂಸ್‌ ಇಂಟರ್‌ ನ್ಯಾಶನಲ್‌ ಮೊದಲಾಗಿ ಪ್ರಕಟಿಸಿತ್ತು. ಪಾಕಿಸ್ಥಾನದ ಹೆಚ್ಚಿನೆಲ್ಲ ಪತ್ರಿಕೆಗಳು, ನ್ಯೂಸ ವೆಬ್‌ ಪೋರ್ಟಲ್‌ ಗಳು ಈ ಸುಳ್ಳನ್ನೇ ಅನುಸರಿಸಿ ವರದಿ ಮಾಡಿದವು. 

ಅದಾಗಿ ಭಾರತೀಯ ವಾಯು ಪಡೆ ಹೊರಡಿಸಿದ ತನ್ನ ಅಧಿಕೃತ ಹೇಳಿಕೆಯಲ್ಲಿ, 39 ವರ್ಷ ಸಾಧನಶೀಲ ಸೇವೆಸಲ್ಲಿಸಿದ ಏರ್‌ ಮಾರ್ಶಲ್‌ ಹರಿ ಕುಮಾರ್‌ ಅವರು ಫೆ.28ರಂದು ನಿವೃತ್ತರಾಗಿದ್ದಾರೆ ಎಂದು ತಿಳಿಸಿತು.

ಭಾರತೀಯ ವಾಯು ಪಡೆಗೆ 39 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿರುವ ಸಿ ಎಚ್‌ ಕುಮಾರ್‌ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ, ವಿಶಿಷ್ಟ ಸೇವಾ ಪದಕ ಲಭಿಸಿತ್ತಲ್ಲದೆ ಅವರನ್ನು 2017ರ ಜನವರಿ 1ರಂದು ರಾಷ್ಟ್ರಪತಿಗಳ ಗೌರವ ಏರ್‌ ಫೋರ್ಸ್‌ ಎಡಿಸಿಯಾಗಿ ನೇಮಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next