Advertisement

ಜ.27ರಿಂದ ಏರ್‌ ಇಂಡಿಯಾಕ್ಕೆ ಟಾಟಾ ಮಾಲಿಕ

08:58 PM Jan 24, 2022 | Team Udayavani |

ನವದೆಹಲಿ: ಟಾಟಾ ಸಮೂಹದ ಹಲವು ದಶಕಗಳ ಕನಸು ಈಡೇರುವ ಗಳಿಗೆ ಸನ್ನಿಹಿತವಾಗಿದೆ.

Advertisement

ಇದುವರೆಗೆ ಸರ್ಕಾರದ ವಶದಲ್ಲಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ; ಜ.27ಕ್ಕೆ ಟಾಟಾ ಸಮೂಹದ ಅಂಗಸಂಸ್ಥೆಯಾದ ಟೆಲೆಸ್‌ ಪ್ರೈವೇಟ್‌ ಲಿಮಿಟೆಡ್‌ ಅಧೀನಕ್ಕೆ ಬರಲಿದೆ.

ಅಲ್ಲಿಂದ ಅದು ಸಂಪೂರ್ಣವಾಗಿ ಖಾಸಗಿಯಾಗಿ ಬದಲಾಗಿದೆ.

ಕಳೆದವರ್ಷ ಅ.8ಕ್ಕೆ ಕೇಂದ್ರ ಸರ್ಕಾರ ಈ ಸಂಸ್ಥೆಯನ್ನು ಟಾಟಾ ಸಮೂಹಕ್ಕೆ 18,000 ಕೋಟಿ ರೂ.ಗೆ ಮಾರಿತ್ತು. ಈ ವೇಳೆ ಟಾಟಾ, ಸ್ಪೈಸ್‌ ಜೆಟ್‌ ಪೈಪೋಟಿಯನ್ನು ಮೀರಿ ನಿಂತಿತ್ತು. ಮೂಲತಃ ಈ ಸಂಸ್ಥೆಯನ್ನು ಶುರು ಮಾಡಿದ್ದೇ ಜೆಆರ್‌ಡಿ ಟಾಟಾ.

1932ರಲ್ಲಿ ಟಾಟಾ ಏರ್‌ಲೈನ್ಸ್‌ ಎಂಬ ಹೆಸರಿನಿಂದ ಶುರುಮಾಡಲಾಗಿತ್ತು. 1946ರಲ್ಲಿ ಅದನ್ನು ರಾಷ್ಟ್ರೀಕರಣ ಮಾಡಿ ಸರ್ಕಾರಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಗ ಏರ್‌ ಇಂಡಿಯಾ ಎಂದು ಹೆಸರು ಬದಲಾಯಿಸಲಾಗಿತ್ತು. ಈಗ ಆ ಸಂಸ್ಥೆ ಮತ್ತೆ ಟಾಟಾ ವಶಕ್ಕೆ ಮರಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next