Advertisement

ಏರಿಂಡಿಯಾ ಖರೀದಿಗೆ ಇಂಡಿಗೋ ಮತ್ತಿತರ ಏರ್‌ ಲೈನ್ಸ್‌ಗಳ ಆಸಕ್ತಿ

04:38 PM Jun 29, 2017 | |

ಹೊಸದಿಲ್ಲಿ : ಇಂಡಿಗೋ ಏರ್‌ ಲೈನ್ಸ್‌ ಒಡೆತನ ಹೊಂದಿರುವ ಭಾರತದ ಇಂಟರ್‌ ಗ್ಲೋಬ್‌ ಏವಿಯೇಶನ್‌ ಸಂಸ್ಥೆಯು ಸರಕಾರಿ ಒಡೆತನದ ಏರಿಂಡಿಯಾ ಖರೀದಿಯಲ್ಲಿ ಆಸಕ್ತಿಯನ್ನು ತೋರಿರುವುದಾಗಿ ಸಿಎನ್‌ಬಿಸಿ ಟಿವಿ 18 ವರದಿ ಮಾಡಿದೆ. 

Advertisement

ಇಂಡಿಗೋ ಮಾತ್ರವಲ್ಲದೇ ಇನ್ನೂ ಕೆಲವು ದೇಶೀಯ ಖಾಸಗಿ ವಿಮಾನಯಾನ ಸಂಸ್ಥೆಗಳು ಏರಿಂಡಿಯಾ ಖರೀದಿಯಲ್ಲಿ ಆಸಕ್ತಿ ತೋರಿವೆ ಎಂದು ನಾಗರಿಕ ವಾಯುಯಾನ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖೀಸಿ ಸಿಎನ್‌ಬಿಸಿ ಟಿವಿ 18 ವರದಿ ಮಾಡಿದೆ. ಆದರೆ ಇತರ ವಾಯು ಯಾನ ಸಂಸ್ಥೆಗಳು ಯಾವುವು ಎಂಬುದನ್ನು ವರದಿಯಲ್ಲಿ ಹೆಸರಿಸಲಾಗಿಲ್ಲ.

ಏರಿಂಡಿಯಾ ಖರೀದಿಯಲ್ಲಿ ಆಸಕ್ತಿ ಪ್ರಕಟಿಸಿದ ಬೆನ್ನಿಗೇ ಇಂಟರ್‌ ಗ್ಲೋಬ್‌ ಕಂಪೆನಿಯ ಶೇರುಗಳು ಶೇ.3.8ರಷ್ಟು ಕುಸಿದಿವೆ. 

ಏರಿಂಡಿಯಾದಲ್ಲಿನ ಯಾವ ಪ್ರಮಾಣದ ಬಂಡವಾಳವನ್ನು ಮಾರಬೇಕು ಎಂಬುದನ್ನು ನಿರ್ಧರಿಸಲು ಸಮಿತಿಯೊಂದನ್ನು ರೂಪಿಸಲಾಗುವುದು ಎಂದು ನಿನ್ನೆ ಬುಧವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇತ್ಲಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next