Advertisement

ಹಿರಿಯ ನಾಗರಿಕರಿಗೆ ʼಏರ್‌ ಇಂಡಿಯಾʼ ಕೊಡುಗೆ;-

02:54 PM Oct 06, 2021 | Team Udayavani |

ನವದೆಹಲಿ: ಏರ್‌ ಇಂಡಿಯಾ ವಿಮಾನಯಾನದ ಟಿಕೆಟ್‌ ದರಲ್ಲಿ ಹಿರಿಯ ನಾಗರಿಕರಿಗೆ ಭಾರಿ ರಿಯಾಯತಿ ಘೋಷಿಸಿದೆ. ಈ ರಿಯಾಯಿತಿಯು ವಾಣಿಜ್ಯ ಮಾರ್ಗವಾಗಿ ಚಲಿಸುವ ಹಲವು ವಿಮಾನ ಯಾನಗಳಿಗೆ ಅನ್ವಯಿಸುತ್ತವೆ.

Advertisement

ಈ ರೀಯಾಯಿತಿ ದರದ ಸೌಲಭ್ಯ ಪಡೆಯಲು ಕನಿಷ್ಠ 3 ದಿನಗಳಿಗಿಂತ ಮುಂಚೆ ಟಿಕೆಟ್‌ ಕಾಯ್ದಿರಿಸಬೇಕು. ಈ ಸೌಲಭ್ಯ 60 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ದೇಶೀಯ ಸಂಚಾರಕ್ಕೆ ದೊರೆಯುತ್ತದೆ.

ಇದನ್ನೂ ಓದಿ;- ದೇಹ,ಮನಸ್ಸು, ಬುದ್ಧಿಯ ಮೇಲೆ ಹಿಡಿತವಿರಲಿ

ಇಕನಾಮಿಕ್‌ ಕ್ಲಾಸ್‌ನ ಟಿಕೆಟ್‌ಗಳಿಗೆ ಇದು ಅನ್ವಯಿಸುವುದರಿಂದ, ಹಿರಿಯ ನಾಗರಿಕರ ರಜಾ ಸುತ್ತಾಟಗಳಿಗೆ ಬಳಸಬಹುದು, ಅಮ್ಮ, ಅಜ್ಜಿ-ತಾತ ಮುಂತಾದ ಹಿರಿಯರನ್ನು ವೈಮಾನಿಕ ಸುತ್ತಾಟಕ್ಕೆ ಕರೆದೊಯ್ಯಲು ಇದು ಸಕಾಲ.

ಟಿಕೆಟ್‌ ಬುಕ್‌ ಮಾಡುವ ಮೊದಲು ನೀವು ಗಮನಿಸಬೇಕಾದ ಅಂಶಗಳು;- ವಯಸ್ಸಿನ ದೃಢೀಕರನಕ್ಕಾಗಿ ಸ್ಪಸ್ಟವಾಗಿ ಮುದ್ರಿಸಲ್ಪಟ್ಟ ಗುರುತಿನ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ತರತಕ್ಕದ್ದು. ಅಗತ್ಯವಿರುವ ವಯಸ್ಸಿನ ದೃಢೀಕರಣ ಮತ್ತು ಆಧಾರ್‌ ತರದಿದ್ದಲ್ಲಿ ಮೂಲ ನಿಗಧಿತ ದರಕ್ಕೆ ಟಿಕೆಟ್‌ ಪಡೆಯಬೇಕಾಗುತ್ತದೆ.  ಈ ರೀಯಾಯಿತಿಯು ಡಿಸೆಂಬರ್‌ 2020ರಲ್ಲೆ ಜಾರಿಯಾದರೂ ಕೂಡ ಇತ್ತೀಚೆಗೆ ಚಾಲ್ತಿಗೆ ಬಂದಿದೆ.

Advertisement

ಈ ರಿಯಾಯಿತಿ  ಡಿಸೆಂಬರ್‌ 2021ರ ವರೆಗೆ ಅನ್ವಯಿಸುತ್ತದೆ. ಹಿರಿಯರು ಮಕ್ಕಳನ್ನು ಕರೆದೊಯ್ದಲ್ಲಿ ನಿಯಮದ ಪ್ರಕಾರ ಮಕ್ಕಳಿಗೆ ಪೂರ್ತಿ ವೆಚ್ಚ ವಿಧಿಸಲಾಗುವುದು ಎಂದು ಏರ್‌ ಇಂಡಿಯಾ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು s: //www.airindia.in/senior-citizen-concession.html

Advertisement

Udayavani is now on Telegram. Click here to join our channel and stay updated with the latest news.

Next