Advertisement

ಕಲ್ಲಿಕೋಟೆ: ರನ್ ವೇನಿಂದ ಜಾರಿ ಕಮರಿಗೆ ಉರುಳಿದ ವಿಮಾನ ; ಪೈಲಟ್ ಸಹಿತ 16 ಸಾವು

04:20 AM Aug 08, 2020 | Hari Prasad |

ಮಲ್ಲಪ್ಪುರಂ: ಇಲ್ಲಿನ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿದೆ.

Advertisement

ವಂದೇ ಭಾರತ್ ಮಿಷನ್ ನಲ್ಲಿ ದುಬಾಯಿಯಿಂದ ಇಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ರನ್ ವೇನಲ್ಲಿ ಜಾರಿದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.

ಈ ವಿಮಾನವು ರನ್ ವೇನಲ್ಲಿ ಇಳಿಯುವ ಯತ್ನದಲ್ಲಿ ಪೈಲಟ್ ನಿಯಂತ್ರಣ ತಪ್ಪಿ ಮುಂದಕ್ಕೆ ಜಾರಿ 35 ಅಡಿ ಆಳದ ಕಮರಿಗೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ನಾಧರಿಸಿ ಮನೋರಮಾ ವೆಬ್ ಸೈಟ್ ವರದಿ ಮಾಡಿದೆ.

ಹೀಗೆ ಕಮರಿಗೆ ಉರುಳಿದ ವಿಮಾನ ಇಬ್ಭಾಗವಾಗಿದೆ ಮತ್ತು ಆ ಸ್ಥಳದಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಈ ದುರಂತದಲ್ಲಿ ವಿಮಾನದ ಪೈಲಟ್ ಸಹಿತ ಒಟ್ಟು 16 ಜನರು ಮೃತಪಟ್ಟಿದ್ದಾರೆಎಂದು ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಗಳಿಂದ ತಿಳಿದುಬಂದಿದೆ.

Advertisement

ಈ ವಿಮಾನದಲ್ಲಿ ಒಟ್ಟು 180 ಜನರು ಪ್ರಯಾಣಿಸುತ್ತಿದ್ದರು. ಇವರಲ್ಲಿ 174 ಜನ ಪ್ರಯಾಣಿಕರು, 4 ಕ್ಯಾಬಿನ್ ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿದ್ದಾರೆ. ಪ್ರಯಾಣಿಕರಲ್ಲಿ 10 ಜನ ಮಕ್ಕಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ದುರ್ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ 24 ಆ್ಯಂಬುಲೆನ್ಸ್ ಗಳು ಘಟನಾ ಸ್ಥಳಕ್ಕೆ ದೌಡಾಯಿಸಿವೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ.

ಇದನ್ನೂ ಓದಿ: ಕಲ್ಲಿಕೋಟೆ ದುರಂತ: ಮಂಗಳೂರು ವಿಮಾನ ದುರಂತದಷ್ಟೇ ತೀವ್ರವಾದ ಘಟನೆ

Advertisement

Udayavani is now on Telegram. Click here to join our channel and stay updated with the latest news.

Next