ಮುಂಬಯಿ: ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ 25 ರ ಹರೆಯದ ಗಗನ ಸಖಿಯೊಬ್ಬಳ ಮೇಲೆ ಸೋಮವಾರ ಮೂವರು ಗ್ಯಾಂಗ್ ರೇಪ್ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಹೋದ್ಯೋಗಿಯೋರ್ವನನ್ನು ಬಂಧಿಸಿದ್ದಾರೆ. ಅತ್ಯಾಚಾರಕ್ಕೀಡಾದ ಕೋಣೆಯಲ್ಲಿ ಸಂತ್ರಸ್ತೆಯೊಂದಿಗೆ ಮೂವರು ಯುವಕರು ಮತ್ತು ಮಹಿಳೆಯೊಬ್ಬಳು ಇದ್ದರು ಎಂದು ಹೇಳಲಾಗಿದೆ.
ಆರೋಪಿ ಸ್ವಪ್ನಿಲ್ ಬಡೋನಿಯಾ (23) ಎಂಬಾತನನ್ನು ಬಂಧಿಸಿಲಾಗಿದ್ದು, ಈತ ಗಗನಸಖೀ ಕೆಲಸ ನಿರ್ವಹಿಸುತ್ತಿರುವ ಸಂಸ್ಥೆಯಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನಿಬ್ಬರ ಪಾತ್ರದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆರೋಪಿ ಸ್ವಪ್ನಿಲ್ ಮತ್ತು ಗಗನಸಖಿ ಕೃತ್ಯ ನಡೆಯುವ ಮೊದಲು ಜೊತೆಯಲ್ಲಿ ಒಂದೇ ಕಾರಿನಲ್ಲಿ ಪ್ರಯಾಣಿಸಿ ಬಾರ್ ಒಂದರಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದರು . ಬಳಿಕ ಮನೆಗೆ ತೆರಳಲು ಸಾಧ್ಯವಾಗದೆ , ಸ್ವಪ್ನಿಲ್ ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದು ಅಲ್ಲಿ ಆಕೆಯ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.