Advertisement
ಏನಿದರ ವಿಶೇಷ?: ಐಒಎಫ್ ನಡೆಸುವ ವಾಯುದಾಳಿಯ ಕಾರ್ಯಾಚರಣೆಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆ. ಇದನ್ನು ಆಡುವವರು ಐಎಎಫ್ನ ಯುದ್ಧ ವಿಮಾನಗಳಾದ ಸುಖೋಯ್, ಮಿಗ್-17, ಮಿಡ್-ಏರ್ ಫ‌್ಯುಯೆಲ್ ಟ್ಯಾಂಕರ್ ಇತ್ಯಾದಿ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಟ ಆರಂಭಕ್ಕೂ ಮುನ್ನ ಅವುಗಳ ಚಾಲನಾ ತರಬೇತಿ ಪಡೆಯಬಹುದು. ಉದಾಹರಣೆಗೆ, ಗಂಟೆಗೆ 830 ಕಿ.ಮೀ. ವೇಗದಲ್ಲಿ ಹಾರುವ ಹಾಕ್ 132 ವಿಮಾನ ತರಬೇತಿಯನ್ನು ಪಡೆದು ಆನಂತರ ಅದನ್ನು ಗೇಮ್‌ನಲ್ಲಿ ಬಳಸಬಹುದು. ಇದರಿಂದಾಗಿ, ಐಎಎಫ್ ಯುದ್ಧ ವಿಮಾನಗಳ ತಾಂತ್ರಿಕತೆಯ ಪರಿಚಯ ಯುವಕರಿಗೆ ಸಿಗಲಿದೆ ಎಂಬ ಆಶಯ ಐಎಎಫ್ನದ್ದು. ಒಟ್ಟಿನಲ್ಲಿ, ಭಾರತೀಯ ವಾಯುಪಡೆಗೆ ಸೇರುವಂತೆ ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಗೇಮ್ ಬಿಡುಗಡೆಗೊಳಿಸಲಾಗಿದೆ. Advertisement
ಅಭಿನಂದನ್ ಗೇಮ್ ಆ್ಯಪ್
12:27 AM Aug 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.