Advertisement

Purvanchal Expressway; ಯುದ್ಧವಿಮಾನಗಳಿಂದ ತುರ್ತು ಸಮಾರಾಭ್ಯಾಸ

09:16 PM Jun 24, 2023 | Team Udayavani |

ನವದೆಹಲಿ: ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ ವೇನಲ್ಲಿ ಭಾರತೀಯ ವಾಯುಪಡೆಯ ಯುದ್ಧ ಹಾಗೂ ಸರಕು ಸಾಗಣೆ ವಿಮಾನಗಳು ಶನಿವಾರ ತುರ್ತು ಸಮರಾಭ್ಯಾಸ ನಡೆಸಿವೆ.ಏರ್‌ಸ್ಟ್ರಿಪ್‌ನ ಗುಣಮಟ್ಟ ಹಾಗೂ ಸಾಮರ್ಥ್ಯ ಪರೀಕ್ಷಿಸಲು ಐಎಎಫ್ನ 10 ಯುದ್ಧ ವಿಮಾನಗಳು ಈ ತುರ್ತು ಸಮರಾಭ್ಯಾಸ ನಡೆಸಿವೆ.

Advertisement

ಇದು ತುರ್ತು ಪರಿಸ್ಥಿತಿಗಳಲ್ಲಿ ಯುದ್ಧ ವಿಮಾನಗಳ ಹಾರಾಟ, ಟೇಕಾಫ್ ಮತ್ತು ಸುರಕ್ಷಿತ ಲ್ಯಾಂಡಿಂಗ್‌ ಅನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆಸಲಾಗಿತ್ತು. ಮಿರಾಜ್‌, ಜಾಗ್ವಾರ್‌, ಟ್ಯಾಂಟನೋವ್‌ ಯುದ್ಧ ವಿಮಾನಗಳ ಜತೆಗೆ ಎಎನ್‌32 ಒಂದು ಸರಕು ಸಾಗಣೆ ವಿಮಾನವೂ ಕೂಡ ಸಮರಾಭ್ಯಾಸದಲ್ಲಿ ಭಾಗಿಯಾಗಿತ್ತೆಂದು ಸುಲ್ತಾನ್‌ಪುರ ಜಿಲ್ಲಾಧಿಕಾರಿ ಜಸೀತ್‌ ಕೌರ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next