ಅಂಬಾಲಾ: ಹರಿಯಾಣದ ಅಂಬಾಲಾ ವಾಯುನೆಲೆಯಿಂದ ಹಾರಾಟ ಆರಂಭಿಸಿದ ವಾಯುಪಡೆಯ ಜೆಟ್ ಜಾಗ್ವಾರ್‌ಗೆ ಹಕ್ಕಿಯೊಂದು ಢಿಕ್ಕಿಯಾಗಿ ತುರ್ತು ಲ್ಯಾಂಡಿಂಗ್ ಮಾಡಬೇಕಾದ ಘಟನೆ ಗುರುವಾರ ನಡೆದಿದೆ. ಪೈಲಟ್ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಹೋಗಿದ್ದು, ವಿಮಾನವೂ ಸುರಕ್ಷಿತವಾಗಿ ಇಳಿದಿದೆ.
ಹಾರಾಟದ ವೇಳೆ ಹಕ್ಕಿಢಿಕ್ಕಿಯಾದ ತಕ್ಷಣ ಪೈಲಟ್ ವಿಮಾನದ ಇಂಧನ ಟ್ಯಾಂಕ್ ಮತ್ತು ತರಬೇತಿಗೆ ಇಡಲಾಗಿದ್ದ ಸಣ್ಣ ಪ್ರಮಾಣದ ಬಾಂಬ್‌ಗಳನ್ನು ಹೊರಗೆ ಎಸೆದಿದ್ದಾರೆ. ಬಳಿಕ ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪೈಲಟ್ ಎಸೆದ ಬಾಂಬ್‌ಗಳು ಜನ ವಸತಿ ಪ್ರದೇಶದಲ್ಲಿ ಬಿದ್ದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು. ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬಂದಿಗಳು ಆಗಮಿಸಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ವಾಯುಪಡೆ ತಿಳಿಸಿದೆ.
ತುರ್ತು ಲ್ಯಾಂಡಿಂಗ್ ವೇಳೆವಿಮಾನದಲ್ಲಿದ್ದ ಬಾಹ್ಯ ಇಂಧನ ಟ್ಯಾಂಕ್, ಬಾಂಬ್‌ಗಳನ್ನುಪೈಲಟ್ ಹೊರಗೆ ಎಸೆಯಲೇ ಬೇಕಾತ್ತದೆ.