Advertisement

ಶೂಟರ್‌ಗಳಿಗೆ ಏರ್‌ ಫೋರ್ಸ್‌ ಬುಲಾವ್‌

12:30 AM Feb 28, 2019 | |

ನವದೆಹಲಿ: ಭಾರತ-ಪಾಕಿಸ್ಥಾನ ನಡುವಿನ ಪರಿಸ್ಥಿತಿ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಶೂಟರ್‌ಗಳನ್ನು “ಇಂಡಿಯನ್‌ ಏರ್‌ ಫೋರ್ಸ್‌’ ವಾಪಸ್‌ ಕರೆಸಿಕೊಂಡಿದೆ. ಇವರೆಂದರೆ ರವಿ ಕುಮಾರ್‌ ಮತ್ತು ದೀಪಕ್‌ ಕುಮಾರ್‌.

Advertisement

ಇವರಲ್ಲಿ ರವಿ ಕುಮಾರ್‌ ಭಾರತೀಯ ವಾಯುಪಡೆಯಲ್ಲಿ ಜೂನಿಯರ್‌ ವಾರಂಟ್‌ ಆಫೀಸರ್‌ ಆಗಿದ್ದಾರೆ. ದೀಪಕ್‌ ಕುಮಾರ್‌ ಸಾರ್ಜೆಂಟ್‌ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.ಆದರೆ ಇವರಿಬ್ಬರೂ ವಿಶ್ವ ಶೂಟಿಂಗ್‌ ಸ್ಪರ್ಧೆಯ 10 ಮೀ. ಏರ್‌ ರೈಫ‌ಲ್‌ ವಿಭಾಗದ ಫೈನಲ್‌ ತಲುಪಲು ವಿಫ‌ಲರಾಗಿದ್ದರು.

“ಇದೊಂದು ಶಿಷ್ಟಾಚಾರದ ಸೂಚನೆ. ಪ್ರತೀ ಪಂದ್ಯಾವಳಿ ಮುಗಿದ ಬಳಿಕ ಮುಂದೆ ಯಾವುದಾದರೂ ಕೂಟವಿದೆಯೇ ಅಥವಾ ಕರ್ತವ್ಯಕ್ಕೆ ಹಾಜರಾಗುತ್ತೀರಾ ಎಂದು ವಾಯುಪಡೆ ಕೇಳುತ್ತದೆ. ಈ ಬಾರಿ ನೇರವಾಗಿ ಕರ್ತವ್ಯಕ್ಕೆ ಮರಳಲು ಸೂಚಿಸಿದೆ’ ಎಂಬುದಾಗಿ ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತ ರವಿ ಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next