Advertisement

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

10:32 AM Mar 13, 2020 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ಭಾರತೀಯರ ಕನಸಿಗೆ ರೆಕ್ಕೆ ಮೂಡಿಸಿದ ಶ್ರೇಯ ಕರ್ನಾಟಕದ ಜಿ. ಆರ್‌. ಗೋಪಿನಾಥ್‌ ಅವರದು.

2. ಕ್ಯಾಪ್ಟನ್‌ ಗೋಪಿನಾಥ್‌ ಎಂದೇ ಹೆಸರಾಗಿರುವ ಅವರು 2003ರಲ್ಲಿ “ಏರ್‌ ಡೆಕ್ಕನ್‌‘ ಎಂಬ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು.

3. ಅವರು 1951ರಂದು ಹಾಸನದ ಗೊರೂರಿನಲ್ಲಿ ಜನಿಸಿದರು.

4. ಅವರ ತಂದೆ, ಕನ್ನಡದ ಖ್ಯಾತ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌.

Advertisement

5. ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಿಜಾಪುರದ ಸೈನಿಕ ಶಾಲೆಯಲ್ಲಿ ಪೂರ್ತಿಗೊಳಿಸಿದರು. ನಂತರ ನ್ಯಾಷನಲ್‌ ಡಿಫೆನ್ಸ್‌ ಆಕಾಡೆಮಿ ಸೇರಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

6. ಎಂಟು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕ್ಯಾಪ್ಟನ್‌ ಗೋಪಿನಾಥ್‌ ಅವರ ಒಲವು ಕೃಷಿ ಮತ್ತು ವ್ಯಾಪಾರದತ್ತ ಹೊರಳಿತು.

7. 1995ರಲ್ಲಿ ಭಾರತ ಸರ್ಕಾರ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು.

8. 1997ರಲ್ಲಿ ಗೋಪಿನಾಥ್‌ ತಮ್ಮ ಸ್ನೇಹಿತ ಸ್ಯಾಮುಯೆಲ್‌ ಜೊತೆಗೂಡಿ ಡೆಕ್ಕನ್‌ ಏವಿಯೇಷನ್‌ ಹೆಲಿಕಾಪ್ಟರ್‌ ಸೇವೆ ಒದಗಿಸುವ ಸಂಸ್ಥೆಯನ್ನು ಹುಟ್ಟುಹಾಕಿದರು.

9. ಮುಂದೆ 2003ರಲ್ಲಿ “ಏರ್‌ ಡೆಕ್ಕನ್‌’ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಿ, ನಾಲ್ಕು ವರ್ಷಗಳಲ್ಲೇ ಲಾಭ ಕಾಣುವ ಮಟ್ಟಿಗೆ ಬೆಳೆಸಿದರು.

10. ಆ ಸಮಯದಲ್ಲಿ ಏರ್‌ ಡೆಕ್ಕನ್‌ ಬಾರತದ 69 ನಗರಗಳಲ್ಲಿ ಕಾರ್ಯಾಚರಿಸುತ್ತಿತ್ತು.

ಸಂಗ್ರಹ: ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next