Advertisement
ಹತ್ತು ದಿನಗಳ ಹಿಂದೆ ಜೋಹಾನ್ಸ್‌ಬರ್ಗ್‌ನಿಂದ ಹೊರಟಿದ್ದ ಆಫ್ರಿಕಿಯಾ ಏರ್‌ವೆಸ್ ವಿಮಾನ ಲಿಬಿಯಾ ರಾಜಧಾನಿ ಟ್ರಿಪೊಲಿಯಲ್ಲಿ ಇಳಿಯಲು ಯತ್ನಿಸುತ್ತಿದ್ದ ವೇಳೆ ಪತನಗೊಂಡು 103 ಮಂದಿ ಬಲಿಯಾಗಿದ್ದರು. 9 ವರ್ಷದ ಡಚ್ ಬಾಲಕನೊಬ್ಬ ಮಾತ್ರ ಬದುಕುಳಿದಿದ್ದ. ಒಂದು ತಿಂಗಳ ಹಿಂದೆ ಪೋಲಂಡ್ ಅಧ್ಯಕ್ಷ ಲೆಚ್ಕೆಝಿನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನ ಪಶ್ಚಿಮ ರಶ್ಯದ ಸ್ಮೋಲೆನ್‌ಸ್ಕ್ ಸಮೀಪ ಅಪಘಾತಕ್ಕೀಡಾಗಿ ಅವರು ಮತ್ತು ಇತರ 92 ಮಂದಿ ಬಲಿಯಾಗಿದ್ದರು.
Related Articles
ಸ್ಕ್ನಲ್ಲಿ ಪುಲ್ಕೊವೊ ಏರ್‌ಲೈನ್ಸ್ ವಿಮಾನ ಪತನಗೊಂಡು 170 ಮಂದಿ ಮತ್ತು ಸೆಪ್ಟಂಬರ್‌ನಲ್ಲಿ ಬ್ರೆಝಿಲ್‌ನಲ್ಲಿ ಗೋಲ್ ಏರ್‌ಲೈನ್ಸ್ ವಿಮಾನ ಪತನಗೊಂಡು 154 ಮಂದಿ ಮಡಿದಿದ್ದರು.
Advertisement
ಇತರ ದುರಂತಗಳು2005 ಆಗಸ್ಟ್: ಕೊಲಂಬಿಯ-ವೆನೆಜುವೆಲ ಗಡಿಯಲ್ಲಿ ವೆಸ್ಟ್ ಕೆರಿಬಿಯನ್ ಏರ್‌ವೆಸ್ ವಿಮಾನ ಪರ್ವತಕ್ಕೆ ಢಿಕ್ಕಿ, 160 ಬಲಿ. ಇಂಡೋನೇಶ್ಯದ ಮೆಡಾನ್‌ನಲ್ಲಿ ಮಂಡಲ ಏರ್‌ಲೈನ್ಸ್ ವಿಮಾನ ಎಡಕ್ಕೆ ವಾಲುತ್ತ ರನ್‌ವೇ ಬಿಟ್ಟೋಡಿ ವಸತಿ ಪ್ರದೇಶಕ್ಕೆ ನುಗ್ಗಿ ಸ್ಫೋಟ. 143 ಬಲಿ. 2005 ಫೆಬ್ರವರಿ: ಕಾಬೂಲ್ ಸಮೀಪ ಕಾಮ್ ಏರ್ ಫ್ಲೈಟ್ 11,000 ಅಡಿ ಎತ್ತರದ ಚಪೇರಿ ಪರ್ವತಕ್ಕೆ ಅಪ್ಪಳಿಸಿ 104 ಮಂದಿ ಬಲಿ. 2003 ಫೆಬ್ರವರಿ: ಇರಾನ್ ರಿವಲ್ಯೂಶನರಿ ಗಾರ್ಡ್‌ಗೆ ಸೇರಿದ ಮಿಲಿಟರಿ ವಿಮಾನ ಪರ್ವತಕ್ಕೆ ಢಿಕ್ಕಿ, 275 ಸಾವು ಮತ್ತು ಸುಡಾನ್ ಏರ್‌ವೆàಸ್ ವಿಮಾನ ಸುಡಾನ್ ಬಂದರು ಸಮೀಪ ಪತನ, 116 ಬಲಿ. 2003 ಮಾರ್ಚ್: ಅಲ್ಜೀರಿಯದ ವಿಮಾನವೊಂದು ಮೇಲೇರುವ ವೇಳೆ ದುರಂತ. 100ಕ್ಕೂ ಅಧಿಕ ಸಾವು. 2002 ಮೇ 25: ಚೀನಾ ಏರ್‌ಲೈನ್ಸ್ ವಿಮಾನ ಆಗಸ ಮಧ್ಯೆ ಹೋಳಾಗಿ ತೈವಾನ್ ಕೊಲ್ಲಿಗೆ ಪತನ, ಎಲ್ಲ 225 ಬಲಿ. ಇದಕ್ಕೆ ಮುನ್ನ ಚೀನದ ಇನ್ನೊಂದು
ವಿಮಾನ ದಟ್ಟ ಮಂಜಿನಲ್ಲಿ ದಕ್ಷಿಣ ಕೊರಿಯದ ಬುಸಾನ್ ವಿಮಾನ ನಿಲ್ದಾಣದಲ್ಲಿ ಇಳಿಯಲುಯತ್ನಿಸುವ ವೇಳೆ ಪರ್ವತಕ್ಕೆ ಢಿಕ್ಕಿ, 166 ಪ್ರಯಾಣಿಕರ ಪೈಕಿ128 ಬಲಿ. ಆ ವರ್ಷ ಕೊಲಂಬಿಯದ ಇಪಿಯೇಲ್ಸ್ ಸಮೀಪ ಟಾಮಿ ವಿಮಾನ ಪತನದಲ್ಲಿ 92, ನೈಜೀರಿಯಾದ ಕಾನೊದಲ್ಲಿ ಇಎಎಸ್‌ಏರ್‌ಲೈನ್ಸ್ ವಿಮಾನ ಪತನದಲ್ಲಿ
77 ಮತ್ತು ಜರ್ಮನಿಯ ಉಬರ್‌ಲಿಂಜೆನ್‌ನಲ್ಲಿ ಆಗಸ ಮಧ್ಯೆ ವಿಮಾನಗಳ ಢಿಕ್ಕಿಯಲ್ಲಿ 71 ಬಲಿ. 2001 ನವೆಂಬರ್: ಅಮೆರಿಕದ ಏರ್‌ಲೈನ್ಸ್ ಏರ್‌ಬಸ್ ಎ 300 ಜೆಎಫ್‌ಕೆ ವಿಮಾನ ನಿಲ್ದಾಣದಿಂದ ಮೇಲೇರಿದ ಬಳಿಕ ಪತನ. ನೆಲದಲ್ಲಿದ್ದವರ ಸಹಿತ 265 ಬಲಿ. 2001 ಜುಲೈ: ಅಮೆರಿಕ ಏರ್‌ಲೈನ್ಸ್‌ನ ಇನ್ನೊಂದು ವಿಮಾನ ವರ್ಜೀನಿಯ ಆರ್ಲಿಂಗ್ಟನ್ ಸಮೀಪ ಪತನ, 189 ಮಂದಿ ಬಲಿ. ಅದೇ ತಿಂಗಳು ವ್ಲಾದಿವೋಸ್ತೊಕಾವಿಯ ವಿಮಾನ ಸೈಬೀರಿಯದ ಅರಣ್ಯದಲ್ಲಿ ಬಿದ್ದು ಸ್ಫೋಟ ಗೊಂಡು 145 ಬಲಿ. ಅಲ್ಲದೆ ಕಳೆದ ಹತ್ತು ವರ್ಷಗಳಲ್ಲಿ ಸಣ್ಣ ವಿಮಾನಗಳ ಮತ್ತು ಕಡಿಮೆ ಸಾವು-ನೋವು ಉಂಟಾದ ಅನೇಕ ದುರಂತಗಳು ಸಂಭವಿಸಿವೆ.