Advertisement

6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕಾ ಪ್ರಯೋಗ : ಏಮ್ಸ್

09:07 PM Jun 14, 2021 | Team Udayavani |

ನವ ದೆಹಲಿ : 6 ರಿಂದ12 ವರ್ಷದೊಳಗಿನ ಮಕ್ಕಳ ಮೇಲೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಕ್ಲಿನಿಕಲ್ ಪ್ರಯೋಗಗಳಿಗಾಗಿ ನಾಳೆ(ಮಂಗಳವಾರ, ಜೂನ್ 15) ಸ್ಕ್ರೀನಿಂಗ್ ಆರಂಭಿಸಲಿದೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್)  ದೆಹಲಿಯ ಸಮುದಾಯ ಔಷಧ ಕೇಂದ್ರದ ಪ್ರೊಫೆಸರ್ ಡಾ.ಸಂಜಯ್ ರೈ, ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ಗೆ ತಿಳಿಸಿದ್ದಾರೆ.

Advertisement

12-18 ವರ್ಷಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಆಯ್ಕೆ ಈಗಾಗಲೇ ಮುಗಿದಿದೆ ಮತ್ತು ಈ ವಯಸ್ಸಿನ ಮಕ್ಕಳಿಗೆ ಲಸಿಕೆಯ ಒಂದೇ ಡೋಸ್ ನೀಡಲಾಗುತ್ತದೆ. 6-12 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ಮುಗಿದ ನಂತರ ಏಮ್ಸ್ ನವದೆಹಲಿ 2 ರಿಂದ 6 ವರ್ಷದ ಮಕ್ಕಳಿಗೆ ಪ್ರಯೋಗಗಳನ್ನು ಪ್ರಾರಂಭಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಏಮ್ಸ್ ಪಾಟ್ನಾದ ನಿರ್ದೇಶಕ ಡಾ. ಪ್ರಭಾತ್ ಕುಮಾರ್ ಸಿಂಗ್, ಈ ಲಸಿಕಾ ವೈದ್ಯಕೀಯ ಪ್ರಯೋಗಗಳ ನಂತರ 6-12 ವಯಸ್ಸಿನ ಮತ್ತು ನಂತರ 2-6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ಮಾಡಲಾಗುವುದು. ಆದರೆ ಈಗ ನಾವು 12-18 ವರ್ಷ ವಯಸ್ಸಿನವರಲ್ಲಿ ಪ್ರಯೋಗಗಳನ್ನು ಪ್ರಾರಂಭಿಸಿದ್ದೇವೆ  ಎಂದು ಹೇಳಿದ್ದಾರೆ.

ಮೇ 12 ರಂದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) 2-18 ವರ್ಷಗಳ ಗುಂಪಿನಲ್ಲಿರುವ ಮಕ್ಕಳಲ್ಲಿ ಕೊವಾಕ್ಸಿನ್‌ ನ ಎರಡನೇ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಅನುಮತಿ ನೀಡಿತು. 12-18 ವರ್ಷ, 6-12 ವರ್ಷ ಮತ್ತು 2-6 ವರ್ಷ ವಯಸ್ಸಿನ ತಲಾ 175 ಸ್ವಯಂಸೇವಕರನ್ನು ಹೊಂದಿರುವ ಮೂರು ಭಾಗಗಳಲ್ಲಿ ಪ್ರಯೋಗ ನಡೆಸಲಾಗುವುದು ಎಂದು ಪಿಟಿಐ ವರದಿ ಮಾಡಿದೆ.

Advertisement

ಕೊವಿಡ್ -19 ಮಕ್ಕಳಲ್ಲಿ ಗಂಭೀರ ಪರಿಣಾಮ ಬೀರದೇ ಇದ್ದರೂ ವೈರಸ್ ನಲ್ಲಿ ಬದಲಾವಣೆ ಕಂಡುಬಂದರೆ ವೈರಲ್ ಕಾಯಿಲೆಯ ಪರಿಣಾಮವು ಹೆಚ್ಚಾಗುತ್ತದೆ ಎಂದು ಕೇಂದ್ರವು ಎಚ್ಚರಿಸಿದ ನಂತರ ಮಕ್ಕಳಿಗಾಗಿ ಸಾಮೂಹಿಕ ಇನಾಕ್ಯುಲೇಷನ್ ಡ್ರೈವ್ ನನ್ನು ಪ್ರಾರಂಭಿಸುವ ನಿರ್ಧಾರವು ಬಂದಿದೆ.

ಇನ್ನು, ಭಾರತವು ಈವರೆಗೆ 25,48,49,301 ಫಲಾನುಭವಿಗಳಿಗೆ ಕೊವಿಡ್ -19 ವಿರುದ್ಧ ಲಸಿಕೆ ನೀಡಿದೆ. ಈ ಪೈಕಿ ಸುಮಾರು 1.5 ದಶಲಕ್ಷ ಫಲಾನುಭವಿಗಳಿಗೆ ಕಳೆದ 24 ಗಂಟೆಗಳಲ್ಲಿ ಲಸಿಕೆಗಳನ್ನು ನೀಡಲಾಗಿದೆ.

ಇಂದು ಕೋವಿಡ್ ಸೋಂಕಿನ 70,421 ಹೊಸ ಪ್ರಕರಣಗಳು ದೇಶದಾದ್ಯಂತ ದಾಖಲಾಗಿದ್ದು, ಒಟ್ಟು ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ 29,510,410 ಕ್ಕೆ ಹೆಚ್ಚಳವಾಗಿದೆ.

ಇದನ್ನೂ ಓದಿ : ಜೂನ್‌ 15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next