ನವದೆಹಲಿ: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಈ ಮೂಲಕ ಹಿಜಾಬ್ ಕುರಿತು ಒಟ್ಟು 3 ಅರ್ಜಿಗಳು ಸುಪ್ರೀಂಗೆ ಸಲ್ಲಿಕೆಯಾದಂತಾಗಿವೆ. ಈ ಹಿಂದೆ ಮುನೀಸಾ ಬುಶ್ರಾ ಹಾಗೂ ಜಲೀಸಾ ಸುಲ್ತಾನಾ ಯಾಸೀನ್ ಎಂಬಿಬ್ಬರು ಜಂಟಿಯಾಗಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ:ಸಿಹಿ ಹಂಚಿದ್ದೇ ತಪ್ಪಾಯಿತು.! ಬಿಜೆಪಿ ಬೆಂಬಲಿಸಿದ್ದಕ್ಕೆ ಮುಸ್ಲಿಂ ಯುವಕನ ಹತ್ಯೆ
“”ಕರ್ನಾಟಕ ಹೈಕೋರ್ಟ್‌ನ ತೀರ್ಪು, ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ತಾರತಮ್ಯ ಧೋರಣೆಯನ್ನು ಎತ್ತಿ ತೋರಿಸಿದೆ. ಬಿಜೋಯ್ ಇಮ್ಯಾನ್ಯುವಲ್ ಪ್ರಕರಣದಲ್ಲಿ ಈ ಹಿಂದೆ ನ್ಯಾಯಾಲಯವು ನೀಡಿದ್ದ ವಸ್ತ್ರಸಂಹಿತೆಯ ಸಲಹೆಗಳನ್ನಾಗಲೀ, ಸಮವಸ್ತ್ರದ ನಿಯಮಗಳನ್ನು ಉಲ್ಲಂಘಿಸದೆ ಕೇವಲ ತಲೆಯ ಭಾಗವನ್ನು ಮಾತ್ರ ಮರೆಮಾಚುವಂತೆ ಧರಿಸಲ್ಪಡುವ ಹಿಜಾಬ್ ಉಡುಪನ್ನು ಸಿಖ್ಖರ ಹಾಗೆ ತೊಡಬಹುದು ಎಂಬ ವಾದವನ್ನಾಗಲಿ ನ್ಯಾಯಾಲಯ ಪುರಸ್ಕರಿಸಿಲ್ಲ” ಎಂದು ಅರ್ಜಿದಾರರು ವಾದಿಸಿದ್ದಾರೆ.