Advertisement
‘ಕಾಂಗ್ರೆಸ್‌ನಿಂದಾಗಿ’ ಎರಡು ಬಾರಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ನಿಜವಲ್ಲವೇ ಎಂದು ಓವೈಸಿ ಪ್ರಶ್ನಿಸಿದರು. 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ದೂರವಿಡಲು ಬಯಸುತ್ತೇವೆ ಮತ್ತು ನಾವು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎಂದರು.
ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡ ನಿತೀಶ್ ಕುಮಾರ್ ಅವರನ್ನು ಟೀಕಿಸಿ, ಅವರು ಬಿಜೆಪಿಯಿಂದ ‘ಮಹಾಘಟಬಂಧನ್’ ಗೆ ಪದೇ ಪದೇ ಹಾರುತ್ತಿರುವುದನ್ನು ಪ್ರಶ್ನಿಸಿದರು. ಗೋಧ್ರಾ ಘಟನೆ ಸಂಭವಿಸಿದಾಗ ನಿತೀಶ್ ಕುಮಾರ್ ರೈಲ್ವೇ ಸಚಿವರಾಗಿದ್ದದ್ದು ಸರಿಯಲ್ಲವೇ? ಗುಜರಾತ್ ನರಮೇಧ ನಡೆದಾಗಲೂ ಅವರು ಬಿಜೆಪಿಯೊಂದಿಗೇ ಇದ್ದರು. ಬಿಜೆಪಿ ಜತೆಗಿನ ಮೈತ್ರಿಯಿಂದಾಗಿ ಅವರು ಮುಖ್ಯಮಂತ್ರಿಯಾದರು, ಬಳಿಕ ಬಿಜೆಪಿ ತೊರೆದರು, ಮಹಾಘಟಬಂಧನ್ ರಚಿಸಿದರು, ಸಿಎಂ ಆದರು. ಮತ್ತೆ ಅವರನ್ನು ತೊರೆದರು, ಬಿಜೆಪಿ ಸೇರಿದರು, ಈಗ ಮತ್ತೆ ಅವರನ್ನು ತೊರೆದಿದ್ದಾರೆ ಎಂದು ಕಿಡಿ ಕಾರಿದರು. ಶಿವಸೇನೆ (ಉದ್ಧವ್ ಬಣ) ‘ಜಾತ್ಯತೀತ ಪಕ್ಷ’ವಾಗಿದೆಯೇ ಎಂದು ಪ್ರಶ್ನಿಸಿದ ಓವೈಸಿ, ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ‘ಹೌದು, ಬಾಬರಿ ಮಸೀದಿ ಕೆಡವಿದ್ದಕ್ಕೆ ನಮಗೆ ಹೆಮ್ಮೆ ಇದೆ’ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದಿಂದ ಸಂವಿಧಾನಬಾಹಿರವಾಗಿ 370 ನೇ ವಿಧಿಯನ್ನು ತೆಗೆದುಹಾಕಿದಾಗ ಬಿಜೆಪಿಯನ್ನು ಬೆಂಬಲಿಸಿದರು” ಎಂದರು.
Related Articles
Advertisement