Advertisement

Tamil Nadu: ದಕ್ಷಿಣ ಭಾರತ ಜನಸಂಖ್ಯೆ ಹೆಚ್ಚಳ ಪರ ತ.ನಾಡು ಸಿಎಂ ಬ್ಯಾಟಿಂಗ್‌

11:24 PM Oct 21, 2024 | Team Udayavani |

ಚೆನ್ನೈ: ದಕ್ಷಿಣ ಭಾರತದಲ್ಲಿ ಯುವ ಜನರ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಎರಡು ದಿನಗಳ ಹಿಂದೆಯಷ್ಟೇ ಹೇಳಿದ್ದರು.
ಅದಕ್ಕೆ ದನಿಗೂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು, “ತಮಿಳುನಾಡಿನ ಜನರೂ ಹೆಚ್ಚು ಮಕ್ಕಳನ್ನು ಪಡೆಯಬೇಕು’ ಎಂದು ಪ್ರತಿಪಾದಿಸಿದ್ದಾರೆ.

Advertisement

ಚೆನ್ನೈಯಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “16 ಹೆತ್ತು ಉತ್ತಮವಾಗಿ ಬದುಕಬೇಕು’ ಎಂದು ತಮಿಳಿನಲ್ಲಿ ಗಾದೆ ಮಾತು ಇದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರ ವಿಂಗಡಣೆ ಆದರೆ ತಮಿಳುನಾಡಿನಲ್ಲಿ ಇರುವ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ನಮ್ಮ ಹಿತಕ್ಕೆ ಧಕ್ಕೆಯಾಗಲಿದೆ ಎಂದರು.

ಜತೆಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದ ಮುಖ್ಯಮಂತ್ರಿ ಸ್ಟಾಲಿನ್‌, ತಮಿಳಿನಲ್ಲಿ ಇರುವ ಆಶೀರ್ವಾದದ ಮಾತಿನ ಅನ್ವಯ ಯುವ ಜೋಡಿ 16 ಮಕ್ಕಳನ್ನು ಪಡೆಯಬೇಕು ಎಂದು ಅಕ್ಷರಶಃ ಅರ್ಥವಲ್ಲ ಎಂದೂ ಕಿವಿ ಮಾತುಹೇಳಿದ್ದಾರೆ.

ಆದರೆ ನಮ್ಮ ರಾಜ್ಯದಲ್ಲಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 31ಕ್ಕಿಂತ ಹೆಚ್ಚಾಗಬೇಕೇ ವಿನಾ ಕಡಿಮೆಯಾಗಬಾರದು. ಅದಕ್ಕಾಗಿ ನಮ್ಮ ರಾಜ್ಯದ ಜನರ ಹಿತವನ್ನು ಕಾಯಬೇಕಾಗಿದೆ ಎಂದು ಸ್ಟಾಲಿನ್‌ ಹೇಳಿದ್ದಾರೆ.

ಕ್ಷೇತ್ರ ಪುನರ್‌ ವಿಂಗಡಣೆ ವಿವಾದ
ತಮಿಳುನಾಡು ಸಹಿತ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿವೆ. ಹೀಗಾದರೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಲಾಭವಾಗಿ, ದಕ್ಷಿಣದ ಭಾರತದ ರಾಜ್ಯಗಳಿಗೆ ಕ್ಷೇತ್ರ ನಷ್ಟ ಉಂಟಾಗುತ್ತದೆ ಎಂಬ ವಾದವನ್ನು ಮುಂದಿಟ್ಟಿವೆ.

Advertisement

ಕುಟುಂಬ ಯೋಜನೆಯಲ್ಲಿ ಯಶಸ್ಸು ಹೊಂದಿರುವ ದಕ್ಷಿಣದ ರಾಜ್ಯಗಳ ಲೋಕಸಭಾ ಸೀಟು ಹಂಚಿಕೆಯಲ್ಲಿ ಜನಗಣತಿ ಅನ್ವಯಿಸಿದರೆ ಇಲ್ಲಿ ಸೀಟು ಹಂಚಿಕೆ ಕಡಿಮೆಯಾಗಲಿದೆ. ಇಂಥ ಅನ್ಯಾಯ ದಕ್ಷಿಣದ ರಾಜ್ಯಗಳಿಗೆ ಆಗಬಾರದು.
– ಜೈರಾಮ್‌ ರಮೇಶ್‌, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next