Advertisement

ದರ್ಭಾಂಗಾದಲ್ಲಿ ಏಮ್ಸ್‌ಸ್ಥಾಪನೆ: ಕೇಂದ್ರ ಸಂಪುಟ ಅನುಮೋದನೆ

05:58 PM Sep 17, 2020 | Nagendra Trasi |

ನವದೆಹಲಿ: ಬಿಹಾರದ ದರ್ಭಾಂಗ ಜಿಲ್ಲೆ ಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್‌) ಸ್ಥಾಪಿಸುವ ಬಗ್ಗೆ ಕೇಂದ್ರ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ.

Advertisement

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ವ್ಯಾಪ್ತಿಯಲ್ಲಿ 1,264 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಕೇಂದ್ರ ಸರ್ಕಾರ ಸಂಸ್ಥೆಯ ಸ್ಥಾಪನೆಗೆ ಅನುಮೋದನೆ ನೀಡಿದ 48 ತಿಂಗಳ ಒಳಗಾಗಿ ಕಾಮಗಾರಿ ಪೂರ್ತಿಗೊಳ್ಳಲಿದೆ.

100 ವೈದ್ಯಕೀಯ ಸೀಟುಗಳು, ಬಿಎಸ್‌ಸಿ ನರ್ಸಿಂಗ್‌ಗೆ 60 ಸೀಟುಗಳನ್ನು ಸ್ಥಾಪಿಸಲಾಗುತ್ತದೆ. 15-20 ಸೂಪರ್‌ ಸ್ಪೆಷಾಲಿಟಿ ವಿಭಾಗಗಳನ್ನು ತೆರೆಯಲೂ ಸಂಪುಟ ಸಭೆ ಅನುಮೋದನೆ ನೀಡಿದೆ. ಹೊಸ ಸಂಸ್ಥೆ ಪೂರ್ಣಗೊಂಡ ಬಳಿಕ ಪ್ರತಿ ದಿನ 2 ಸಾವಿರ ಹೊರರೋಗಿಗಳ ಚಿಕಿತ್ಸೆ, ಪ್ರತಿ ತಿಂಗಳಿಗೆ 1 ಸಾವಿರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಸಂಸ್ಥೆ ಹೊಂದಲಿದೆ.

ಮತ್ತೂಂದೆಡೆ ಆರ್ಥಿಕ ವ್ಯವಹಾರಗಳಿಗಾಗಿನಕೇಂದ್ರ ಸಂಪುಟ ಸಮಿತಿ ಹರ್ಯಾಣದ ಪಲ್ವಾಲ್‌ನಿಂದ ಸೋಹಾ°-ಮಾನೆಸರ್‌ -ಖಾಖೌಡಾ ಮೂಲಕ ಸೋನಿಪತ್‌ಗೆ ವಿಶೇಷ ರೈಲು ಯೋಜನೆಯ ಬಗ್ಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 5,617 ಕೋಟಿ ರೂ. ವೆಚ್ಚದಲ್ಲಿ ಅದನ್ನು
ಅನುಷ್ಠಾನಗೊಳಿಸಲಾಗುತ್ತದೆ.

ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಯತ್ನ
ರಾಜಕೀಯವಾಗಿ ಅತ್ಯಂತ ಪ್ರಭಾವಶಾಲಿಯಾಗಿರುವ ಜಾಲವೊಂದು ಈ ವರ್ಷ ನಡೆದಿದ್ದ ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಪ್ರಯತ್ನ ಮಾಡಿತ್ತು. ಹೀಗೆಂದು ಫೇಸ್‌ ಬುಕ್‌ನ ಮಾಜಿ ಉದ್ಯೋಗಿ ಹೇಳಿಕೊಂಡಿದ್ದಾರೆ. ಮಾಹಿತಿ ವಿಶ್ಲೇಷಕರಾಗಿ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದ ಸೋಫಿ ಝಂಗ್‌ ಬರೆದಿರುವ ಆಂತರಿಕ ಟಿಪ್ಪಣಿಯಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ.

Advertisement

“3 ವರ್ಷ ನಾನು ಫೇಸ್‌ಬುಕ್‌ನಲ್ಲಿ ಕೆಲಸ ಮಾಡುತ್ತಿದ್ದೆ. ವಿದೇಶಿ ಸಂಸ್ಥೆಗಳಿಂದ ಹಲವು ಬಾರಿ ನಮ್ಮ ಸಂಸ್ಥೆಯ ಮೂಲಕ ಅವರದ್ದೇ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಮಾಡಲಾಗುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.

ಫೆ.8ರಂದು ನಡೆದಿದ್ದ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಕೂಡ ಪ್ರಭಾವ ಬೀರಲು ಯತ್ನ ನಡೆದಿತ್ತು ಎಂದಿದ್ದಾರೆ. ವಿಚಾರಣೆಗೆ ಗೈರು: ಮತ್ತೂಂದೆಡೆ ದೆಹಲಿ ವಿಧಾನಸಭೆ ಸಮಿತಿಯ ಮುಂದೆ ಹಾಜರಾಗಬೇಕು ಎಂಬ ಸೂಚನೆಯನ್ನು ಫೇಸ್‌ಬುಕ್‌ ಇಂಡಿಯಾದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಸಂಸತ್‌ನ ಸ್ಥಾಯಿ ಸಮಿತಿ ಮುಂದೆ ಹಾಜರಾಗಿರುವ ಹಿನ್ನೆಲೆಯಲ್ಲಿ ವಿಧಾನಸಭೆಯ ಶಾಂತಿ ಮತ್ತು ಸೌಹಾರ್ದ ಸಮಿತಿ ಮುಂದೆ ಹಾಜರಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಉತ್ತರಕ್ಕೆ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next