Advertisement

ಭಾರತ ಫ‌ುಟ್ಬಾಲ್‌ ಕಿರಿಯರ ತಂಡಕ್ಕೆ ಪೋರ್ಚುಗಲ್‌ನ ಮಾಟೋಸ್‌ ನೂತನ ಕೋಚ್

03:45 AM Mar 02, 2017 | Team Udayavani |

ನವದೆಹಲಿ: ಹದಿನೇಳು ವರ್ಷ ವಯೋಮಿತಿಯೊಳಗಿನ ಭಾರತ ಫ‌ುಟ್ಬಾಲ್‌ ತಂಡಕ್ಕೆ ನೂತನ ಕೋಚ್‌ ಆಗಿ ಪೋರ್ಚುಗಲ್‌ನ ಲೂಯಿಸ್‌ ನಾರ್ಟನ್‌ ಡಿ ಮಾಟೋಸ್‌ ಆಯ್ಕೆಯಾಗಿದ್ದಾರೆ.

Advertisement

63 ವರ್ಷದ ಮಾಟೋಸ್‌ ಈ ಹಿಂದಿನ ಕೋಚ್‌ ಆಗಿದ್ದ ನಿಕೋಲಾಯ್‌ ಆ್ಯಡಮ್‌ ಸ್ಥಾನವನ್ನು ತುಂಬಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಮಾಜಿ ಆಟಗಾರ ಬೈಚುಂಗ್‌ ಭುಟಿಯಾ, ಐಎಂ.ವಿಜಯನ್‌, ಇನ್‌ಜೆಟ್ಟಿ ಶ್ರೀನಿವಾಸನ್‌ ಒಳಗೊಂಡ ಅಖೀಲ ಭಾರತೀಯ ಫ‌ುಟ್ಬಾಲ್‌ (ಎಐಎಫ್ಎಫ್) ಸಲಹಾ ಸಮಿತಿ ಮಾಟೋಸ್‌ ಅವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿತು. 

ಮಾಟೋಸ್‌ ಆಯ್ಕೆಯಿಂದ ತಡಕ್ಕೆ ಹೆಚ್ಚಿನ ಬಲಬಂದಿದೆ. ಇವರ ಮಾರ್ಗದರ್ಶನದಲ್ಲಿ ಭಾರತ ವಿಶ್ವಕಪ್‌ನಲ್ಲಿ  ಶ್ರೇಷ್ಠ ಪ್ರದರ್ಶನ ನೀಡಲಿದೆ ಎನ್ನುವ ವಿಶ್ವಾಸವಿದೆ ಎಂದು ಎಐಎಫ್ಎಫ್ ಅಧ್ಯಕ್ಷ ಪ್ರಫ‌ುಲ್‌ ಪಟೇಲ್‌ ತಿಳಿಸಿದ್ದಾರೆ.  ಇದೇ ವೇಳೆ ಮಾಟೋಸ್‌ ಅವಕಾಶ ನೀಡಿದ ಎಐಎಫ್ಎಫ್ಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಮಾಟೋಸ್‌ 5 ಪಂದ್ಯಗಳಲ್ಲಿ ಪೋರ್ಚುಗಲ್‌ ತಂಡದ ಪರ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next