Advertisement

ತರಬೇತಿ ಮುಂದುವರಿಸಲು ಎಐಡಿವೈಒ ಆಗ್ರಹ

05:38 AM Jun 16, 2020 | Lakshmi GovindaRaj |

ಮೈಸೂರು: ನೀಮ್‌ ಟ್ರೈನಿಗಳು ಹಾಗೂ ಅಪ್ರಂಟಿಸ್‌ಗಳ ತರಬೇತಿ ಮುಂದುವರಿಸುವುದು ಹಾಗೂ ಸಂಬಳ ಪಾವತಿ ಸುವಂತೆ ಆಗ್ರಹಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಶನ್‌ ವತಿಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಐಡಿವೈಒ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ, ಲಾಕ್‌ಡೌನ್‌ ಬಳಿಕ ನೀಮ್‌ ಟ್ರೈನಿಗಳು ಹಾಗೂ ಅಪ್ರಂಟಿಸ್‌ ಟ್ರೈನಿಗಳ ಸಮಸ್ಯೆ ಹೆಚ್ಚಾಗುತ್ತಿದೆ.

Advertisement

ಈಗ  ಕಂಪನಿಯಲ್ಲಿ ಕೆಲಸ ಪ್ರಾರಂಭವಾಗಿದೆ. ಆದರೆ, ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗಳಲ್ಲಿ ಮೂರು ವರ್ಷಗಳ ಕಾಂಟ್ರ್ಯಾಕ್ಟ್ ಇದ್ದರೂ, ಟ್ರೈನಿಗಳನ್ನು ವಾಪಸ್‌ ಕೆಲಸಕ್ಕೆ ಕರೆಯುತ್ತಿಲ್ಲ. ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಲಾಕ್‌ ಡೌನ್‌ ವೇಳೆ ಸ್ಟೈಫ‌ಂಡ್‌ ನೀಡಲೇ ಬೇಕೆಂದು  ನಿರ್ದೇಶನವಿದ್ದರೂ ಕೆಲವರಿಗೆ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ನೂರಾರು ಮಂದಿ ನೀಮ್‌ ಟ್ರೈನಿಗಳ ಪರಿಸ್ಥಿತಿ ಅತಂತ್ರವಾಗಿದೆ. ಅವರನ್ನೇ  ಅವಲಂಬಿಸಿರುವ ಕುಟುಂಬಕ್ಕೂ ಕೂಡ ಅಸಹಾಯಕತೆ ಮನೆ ಮಾಡಿದೆ. ಮುಖ್ಯವಾಗಿ ಟ್ರೈನಿಗಳ ಫೆಸಿಲಿಟೇಟರ್‌ ಬಿಎಸ್‌ಎ ವಹಿಸಿಕೊಂಡಿರುವ ಕಂಪನಿಗಳಾದ ಆಟೋಮೋಟಿವ್‌ ಆಕ್ಸೆಲ್‌ಗ‌ಳಲ್ಲಿ ಸುಮಾರು 250 ಟ್ರೈನಿಗಳನ್ನು ಮೂರು  ವರ್ಷಗಳ ಆರ್ಡರ್‌ ಕಾಪಿಯನ್ನು ನೀಡಿಯೂ ಕೆಲಸಕ್ಕೆ ಕರೆಯುತ್ತಿಲ್ಲ. ಇವರೆಲ್ಲ ಕೇವಲ ಒಂದು ವರ್ಷ ಮಾತ್ರ ಕೆಲಸ ಮಾಡಿದ್ದಾರೆ.

ಆದ್ದರಿಂದ ಈ ಕೂಡಲೇ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳು ವಂತೆ ಹಾಗೂ ಬಾಕಿ ಇರುವ ಲಾಕ್‌ಡೌನ್‌  ಹಣವನ್ನು ಪಾವತಿಸುವಂತೆ ಮತ್ತು ತರಬೇತಿ ಮುಗಿದ ನಂತರ ಎಐಸಿಟಿಇ ನಿರ್ದೇಶನದಂತೆ ಸಮರ್ಪಕವಾದ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿದರು. ಪತ್ರಿಭಟನೆಯಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಹರೀಶ್‌, ಕಾರ್ಯದರ್ಶಿ ಸುನೀಲ್‌,  ಸಮಿತಿ ಸದಸ್ಯೆ ಕಲಾವತಿ, ನೀಮ್‌ ಟ್ರೈನಿ ಶಿವಮೂರ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next