Advertisement

ಎಐಡಿಎಸ್‌ಒ 64ನೇ ಸಂಸ್ಥಾಪನಾ ದಿನಾಚರಣೆ

03:26 PM Dec 29, 2017 | Team Udayavani |

ಯಾದಗಿರಿ: ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) 64ನೇ ಸಂಸ್ಥಾಪನಾ
ದಿನದ ಅಂಗವಾಗಿ ಜಿಲ್ಲಾ ಸಮಿತಿ ವತಿಯಿಂದ ನಗರದಾದ್ಯಂತ ಬೀದಿ ಬದಿ ಸಭೆ ಮತ್ತು ಪ್ರಚಾರ ಕಾರ್ಯಕ್ರಮಗಳು ನಡೆದವು.

Advertisement

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ.ಬಿ.ಎನ್‌., ಡಿ. 28, 1954ರಲ್ಲಿ
ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ, ವೈ‚ಜ್ಞಾನಿಕ ಶಿಕ್ಷಣದ ಗುರಿ ಹೊತ್ತು ಪ್ರಾರಂಭವಾದ ಸಂಘಟನೆ ಇಡೀ ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಕಳೆದ ಆರು ದಶಕಗಳಿಂದಲೂ ವಿದ್ಯಾರ್ಥಿ, ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಅವಿರತ ಹೋರಾಟ ನಡೆಸುತ್ತಾ
ಬಂದಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದ್ದ
ಸರ್ಕಾರಗಳು ಶಿಕ್ಷಣದ ಅನುದಾನ ಕಡಿತಗೊಳಿಸಿ ಶಿಕ್ಷಣವನ್ನು ಕಾರ್ಪೋರೇಟ್‌ ಮಡಿಲಿಗೆ ಹಾಕಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆಯಂತೆ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 80ರಷ್ಟು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಿ ಶಾಲೆ-ಕಾಲೇಜುಗಳು ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿವೆ. ಸಮರ್ಪಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಒದಗಿಸುವಲ್ಲಿ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಇಂಥ ಶಿಕ್ಷಣ-ವಿದ್ಯಾರ್ಥಿ ವಿರೋಧಿ ಸರ್ಕಾರ ನೀತಿಗಳ ವಿರುದ್ಧ ವಿದ್ಯಾರ್ಥಿಗಳು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಇನ್ನೋರ್ವ ಭಾಷಣಕಾರ ಎಐಡಿಎಸ್‌ಒ ಕಾರ್ಯದರ್ಶಿ ಸೈದಪ್ಪ ಎಚ್‌.ಪಿ. ಮಾತನಾಡಿ, ಸಮಾಜದಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಒದಗಿಸುವಂತಹ ವ್ಯವಸ್ಥೆ ಬದಲಾವಣೆ ತರುವ ಭಗತ್‌ಸಿಂಗ್‌ ನೇತಾಜಿ ಕಂಡಂತ
ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ರಾಂತಿಕಾರಿಗಳ ಉತ್ತರಾಧಿಕಾರಿ ಸಂಘಟನೆಯಾಗಿ ದೇಶದಾದ್ಯಂತ ಎಐಡಿಎಸ್‌ಒ ಬೆಳೆಯುತ್ತಿದೆ ಎಂದು ಹೇಳಿದರು.

Advertisement

ಎಐಡಿಎಸ್‌ಒ ಸಹ ಕಾರ್ಯದರ್ಶಿ ಸುಭಾಷಚಂದ್ರ ಬಾವೊರ ಅದ್ಯಕ್ಷತೆ ವಹಿಸಿದ್ದರು. ವಿಜಯಕುಮಾರ, ಈಶಪ್ಪ, ಸಿದ್ದಯ್ಯ, ಮಲ್ಲಿಕಾರ್ಜುನ, ಪರಶುರಾಮ, ಹಣಮಂತ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next