Advertisement
ಸುಸ್ಥಿರ ಜೀವನಶೈಲಿಯ ಪ್ರತಿಪಾದಕಿಯಾದ, ಮಾಳವಿಕಾ ಆರ್ ಹೀಗೆ ಹೇಳುತ್ತಾರೆ “ನಾನು ನನ್ನ ಜೈವಿಕ ಪ್ರಜ್ಞಾವಸ್ಥೆಯ ಪ್ರಯಾಣವನ್ನು ಅದರ ಬಗ್ಗೆ ಹೆಚ್ಚು ತಿಳಿಯುವ ಮೂಲಕ ಆರಂಭಿಸಿದೆ. ಇದು ಹೆಚ್ಚು ಬೆದರಿಕೆಯಿಂದ ಕೂಡಿದೆ ಮತ್ತು ಪರಿಸರಕ್ಕೆ ನೀವೇನೂ ಮಾಡುತ್ತಿಲ್ಲ ಎನ್ನುವ ಬಗ್ಗೆ ಅಪರಾಧಿಪ್ರಜ್ಞೆಯನ್ನು ಒಳಗೊಂಡಿದೆ. ಆದರೆ, ಮುಂದೆ ಹೋಗುವ ಮೊದಲು ನಾವು ಪುಟ್ಟ ಹೆಜ್ಜೆಯನ್ನಿಡಬೇಕು ಮತ್ತು ಚಿಕ್ಕ ಬದಲಾವಣೆಗಳೊಂದಿಗೆ ಹೆಚ್ಚು ಆರಾಮದಾಯಕವಾಗಿರಬೇಕು”.
Related Articles
Advertisement
ಸ್ಟೇನ್ ಲೆಸ್ ಸ್ಟೀಲ್ ಗ್ಲಾಸ್ ಮತ್ತು ಕಟ್ಲೆರಿಗಳನ್ನು ಕೊಂಡೊಯ್ಯಿರಿ: ಒಮ್ಮೆ ಲಾಕ್ ಡೌನ್ ಸಡಿಲಗೊಂಡ ನಂತರ ಮತ್ತು ಸಾಂಕ್ರಾಮಿಕ ಮುಗಿದ ನಂತರ, ನೀವು ಪ್ರಯಾಣಿಸುವಾಗ ಸ್ಟೇನ್ ಲೆಸ್ ಸ್ಟೀಲ್ ಗ್ಲಾಸ್ ಕೊಂಡೊಯ್ಯಿರಿ. ದೀರ್ಘ ರಸ್ತೆ ಪ್ರಯಾಣದಲ್ಲಿ ನಿಮಗೆ ಚೈತನ್ಯ ನೀಡಲು ಒಂದು ಕಪ್ ಹೊಗೆಯಾಡುವ ಬಿಸಿ ಟೀ/ಕಾಫಿ ಬೇಕೆನಿಸಿದಾಗ, ಒಂದು ಬಾರಿ ಬಳಸಿ ಕಸದ ಬುಟ್ಟಿಗೆ ಎಸೆಯುವ ಪ್ಲಾಸ್ಟಿಕ್/ಪೇಪರ್ ಕಪ್ ಗಳಲ್ಲಿ ಟೀ ಕುಡಿಯುವ ಬದಲಾಗಿ, ನೀವು ಇದನ್ನು ಬಳಸಬಹುದು. ಹೊಗೆಯಾಡುವ ಪೇಯವನ್ನು ನಿಮ್ಮ ಸ್ಟೀಲ್ ಕಪ್ ಗೆ ಹಾಕಿಸಿಕೊಳ್ಳಿ. ಪ್ಲಾಸ್ಟಿಕ್/ಪೇಪರ್ ಕಪ್ ಗಿಂತ ಸ್ಟೇನ್ ಲೆಸ್ ಸ್ಟೀಲ್ ಕಪ್ ನಲ್ಲಿ ಕುಡಿಯುವುದು ಆರೋಗ್ಯಕರ.
ಗೊಬ್ಬರಕ್ಕೆ ತ್ಯಾಜ್ಯ: ಹೆಚ್ಚಿನ ಸಾವಯವ ತ್ಯಾಜ್ಯವನ್ನು ಕೊಳೆಯಿಸುವ ಮೂಲಕ ನಿಮ್ಮ ತ್ಯಾಜ್ಯ ಪ್ರಮಾಣ ಕಡಿಮೆ ಮಾಡಿ. ಕಾಫಿ ಸಿಪ್ಪೆಗಳು, ತರಕಾರಿ ಸಿಪ್ಪೆಗಳು, ಮೊಟ್ಟೆಯ ಕವಚ ಯಾವುದೇ ಇರಲಿ, ನೀವು ಅದನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಬದಲಾಗಿ, ಅದನ್ನು ಗೊಬ್ಬರ ಮಾಡುವ ಬಿನ್ ಗೆ ಹಾಕಿ, ಇದು ಸಾವಯವ ಪದಾರ್ಥಗಳು ಕೊಳೆತು ನಿಮ್ಮ ಸಸಿಗಳಿಗೆ ಗೊಬ್ಬರವಾಗಿಸುತ್ತದೆ. ನಿಮ್ಮ ಬಳಿ ಯಾವುದೇ ಗಿಡ ಇರದಿದ್ದಲ್ಲಿ, ಗಿಡ ಹೊಂದಿರುವವರಿಗೆ ಅಥವಾ ನರ್ಸರಿಗೆ ಗೊಬ್ಬರ ನೀಡಿ.
ಸೋರುವ ನಲ್ಲಿ ಸರಿಪಡಿಸಿ: ಪ್ರತಿಯೊಂದು ಮನೆಯಲ್ಲೂ, ಅನಗತ್ಯವಾಗಿ ಸೋರುವ ನಲ್ಲಿ ಇರಬಹುದು. ಅದನ್ನು ಸರಿಯಾಗಿ ಗಮನಿಸದಿದ್ದರೆ, ಹೆಚ್ಚಿನ ಪ್ರಮಾಣದ ಲೀಟರ್ ಗಟ್ಟಲೆ ನೀರು ವ್ಯರ್ಥವಾಗುತ್ತದೆ. ಪ್ಲಂಬಿಂಗ್ ನ ಮೂಲ ಕೆಲಸಗಳನ್ನು ಕಲಿಯಿರಿ. ಈ ಮೂಲಕ ವಾಷರ್ ಬೋಲ್ಟ್ ಸಡಿಲವಾಗಿದ್ದರೆ ಅದನ್ನು ಸರಿಪಡಿಸುವುದು ಸುಲಭವಾಗುತ್ತದೆ. ಅದು ಕಷ್ಟವೆನಿಸಿದರೆ, ಕೂಡಲೇ ಅದನ್ನು ಸರಿಪಡಿಸುವ ಪ್ಲಂಬರ್ ಗೆ ಕರೆಮಾಡಿ.
ಪರಿಸರ ಸ್ನೇಹಿ ಎಂದು ಪ್ರಮಾಣಿತವಾದ ಉತ್ಪನ್ನಗಳನ್ನು ಬಳಸಿ: ನೀವು ಮನೆಯಲ್ಲೇ ಸ್ವತಃ ಮಾಡಬಹುದಾದ ಪರಿಹಾರಗಳನ್ನು ಮಾಡುವುದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದರೆ, ದಿನಸಿ ಸ್ಟೋರ್ ನಲ್ಲಿ ಖರೀದಿಸುವಾಗ ಅವು ಔದ್ಯೋಗಿಕ ಸಮಿತಿಗಳು/ಸ್ವತಂತ್ರ ಏಜೆನ್ಸಿಗಳಿಂದ ಪ್ರಾಕೃತಿಕವೆಂದು ಪ್ರಮಾಣೀಕರಿಸಲ್ಪಟ್ಟಿದೆಯೇ ಎಂದು ಪರೀಕ್ಷಿಸಿ ಪ್ರಾಕೃತಿಕ ಪರ್ಯಾಯಗಳನ್ನು ಹುಡುಕಿ. ಉದಾಹರಣೆಗೆ, ನಿಮೈಲ್ ನಂತಹ ಫ್ಲೋರ್ ಕ್ಲೀನರ್ ಗಳು ಟಿಯುವಿ ಇಂಡಿಯಾದಿಂದ ಹಸಿರು ಉತ್ಪನ್ನ ಎಂದು ಪ್ರಮಾಣಿತವಾಗಿದೆ.
ನೀವು ಪರಿಸರಕ್ಕೆ ಸುರಕ್ಷಿತವಾದ ಉತ್ಪನ್ನಕ್ಕೆ ಬದಲಾಗಲು ಆರಂಭಿಸುವ ಮೂಲಕ ಇತರರಿಗೂ ಹೀಗೆ ಮಾಡಲು ಪ್ರೋತ್ಸಾಹಿಸಿ, ಸ್ಥಾಪಿತ ಖರೀದಿದಾರರ ಅಗತ್ಯಗಳನ್ನು ಪೂರೈಸಲು ಉದ್ದಿಮೆ ಯಾವಾಗಲೂ ಹೊಸತನವನ್ನು ಅನ್ವೇಷಿಸುವ ಮೂಲಕ, ಪರಿಸರಕ್ಕೆ ಸುರಕ್ಷಿತವಾದ ಉತ್ಪನ್ನಗಳಿಗೆ ಇನ್ನೂ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.