ಮುಂಬಯಿ: ಪಕ್ಷದ ಏಕ ವ್ಯಕ್ತಿ-ಏಕ ಹುದ್ದೆ ಸೂತ್ರಕ್ಕೆ ಅನುಗುಣವಾಗಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಬಾಳಾಸಾಹೇಬ್ ಥೋರಟ್ ಅವರ ಸ್ಥಳಕ್ಕೆ ಹೊಸ ವ್ಯಕ್ತಿಯನ್ನು ನೇಮಕ ಮಾಡುವ ಕುರಿತು ಅಖೀಲ ಭಾರತ ಕಾಂಗ್ರೆಸ್ ಸಮಿ ತಿಯ (ಎಐಸಿಸಿ) ಮಹಾರಾಷ್ಟ್ರ ಉಸ್ತುವಾರಿ ಎಚ್. ಕೆ. ಪಾಟೀಲ್ ಅವರು ರಾಜ್ಯದ ಹಿರಿಯ ಮುಖಂಡರೊಂದಿಗೆ ಚರ್ಚೆಗಳನ್ನು ನಡೆಸಿದ್ದಾರೆ.
ಥೋರಟ್ ಪ್ರಸ್ತುತ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಜತೆಗೆ ರಾಜ್ಯದ ಎಂವಿಎ ಸರಕಾರದಲ್ಲಿ ಕಂದಾಯ ಸಚಿವ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರೂ ಆಗಿದ್ದಾರೆ.
ಎರಡು ದಿನಗಳ ಮುಂಬಯಿ ಪ್ರವಾಸದಲ್ಲಿರುವ ಪಾಟೀಲ್ ಅವರು ಮಂಗಳವಾರ ರಾತ್ರಿ ಇಲ್ಲಿನ ಸಹ್ಯಾದ್ರಿ ಅತಿಥಿಗೃಹದಲ್ಲಿ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರೊಂದಿಗೆ ಸಭೆ ನಡೆಸಿದರು ಹಾಗೂ ಅನಂತರ ಪಕ್ಷದ ರಾಜ್ಯ ಘಟಕವನ್ನು ಪುನರುಜ್ಜೀವನಗೊಳಿಸುವ ಕುರಿತು ಥೋರಟ್ ಅವರೊಂದಿಗೆ ಚರ್ಚಿಸಿದರು.
ಇದನ್ನೂ ಓದಿ: ಡೈರಿ ಬಿಡುಗಡೆ
ಅಲ್ಲದೆ ರಾಜ್ಯ ಪಿಡಬ್ಲ್ಯುಡಿ ಸಚಿವ ಅಶೋಕ್ ಚವಾಣ್ ಕೂಡ ಬುಧವಾರ ಬೆಳಗ್ಗೆ ಇಲ್ಲಿ ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ. ಪಕ್ಷದ ಪ್ರಸ್ತುತ ಪರಿಸ್ಥಿತಿ ಮತ್ತು ಅದರ ಪುನರುಜ್ಜೀವನಕ್ಕೆ ತೆಗೆದುಕೊಳ್ಳ ಬೇಕಾದ ಕ್ರಮಗಳಿಗೆ ಸಂಬಂಧಿಸಿ ಚರ್ಚೆಗಳು ನಡೆದಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.