Advertisement
ಎಂಜಿಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ “ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ : ಫÅಮ್ ಥಿಯರಿ ಟು ಇಂಪ್ಯಾಕ್ಟ್’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಕೃತಕ ಬುದ್ಧಿಮತ್ತೆ ಪ್ರಸ್ತುತ ನಮ್ಮ ಜೀವನದ ಅವಿಭಾಜ್ಯ ಅಂಗದಂತಾಗಿದೆ. ಜಾಗತಿಕವಾಗಿ ಎದ್ದಿರುವ ಹಲವು ಸವಾಲುಗಳಿಗೆ ಇದರ ಮೂಲಕ ಉತ್ತರ ಕಂಡುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
Related Articles
Advertisement
ಕಂಪ್ಯೂಟರ್‌ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ವಿಶ್ವನಾಥ ಪೈ ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಾಧ್ಯಾಪಿಕೆ ಸುಷ್ಮಾ ಬಂಗೇರ ಯು. ಅತಿಥಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ರೇಖಾ ಎನ್. ಚಂದ್ರ ನಿರೂಪಿಸಿ, ಕಾರ್ಯಕ್ರಮದ ಸಂಯೋಜಕಿ ಹಾಗೂ ಪ್ರಾಧ್ಯಾಪಿಕೆ ಪ್ರವಿತ್ರಾ ಕೆ. ವಂದಿಸಿದರು.
ಶುಕ್ರವಾರ ಸಮಾರೋಪಅಮೆರಿಕ, ಯು.ಕೆ., ಆಸ್ಟ್ರೇಲಿಯಾ, ಸಿಂಗಾಪುರ, ಯುಎಸ್‌ಎ, ಒಮನ್, ಕಾಂಬೋಡಿಯಾ, ಕೆನಡಾ ಸಹಿತ ವಿದೇಶಗಳಿಂದ ಹಾಗೂ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತಮಿಳನಾಡು, ಮಧ್ಯಪ್ರದೇಶ, ಒಡಿಶಾ, ಗುಜರಾತ್, ಪಂಜಾಬ್, ಅಸ್ಸಾಂ ಮೊದಲಾದ ರಾಜ್ಯದ ಪ್ರತಿನಿಧಿಗಳು ಆನ್‌ಲೈನ್ ಹಾಗೂ ಆಫ್ಲೈನ್‌ನಲ್ಲಿ ಭಾಗವಹಿಸಿದ್ದಾರೆ. 40ಕ್ಕೂ ಅಧಿಕ ಸಂಶೋಧನ ಪ್ರಬಂಧ ಮಂಡನೆಯಾಗಲಿದ್ದು, ಇದರಲ್ಲಿ 20 ಪ್ರಬಂಧಗಳನ್ನು ವಿದ್ಯಾರ್ಥಿಗಳು ಮಂಡಿಸಲಿದ್ದಾರೆ. ಆ.23ರ ಮಧ್ಯಾಹ್ನ 2.30ರಿಂದ ಸಮಾರೋಪ ನಡೆಯಲಿದೆ. ಮಾಹೆ ಇಂಟರ್‌ನ್ಯಾಶನಲ್ ರಿಲೇಶನ್ ನಿರ್ದೇಶಕ ಡಾ| ಕರುಣಾಕರ ಕೊಟೆಗಾರ್ ಎ. ಮುಖ್ಯ ಅತಿಥಿಯಾಗಿರುವರು. ವಿವಿಧ ಗೋಷ್ಠಿಗಳು
ಎಐ ಫಾರ್ ವೈರ್‌ಲೆಸ್, ದಿ ಫ್ಯೂಚರ್ ಆಪ್ ಕ್ರಿಯೇಟಿವಿಟಿ ವಿಷಯ ಮಂಡನೆ ನಡೆದಿದೆ. ಆ.23ರಂದು ಪ್ರಬಂಧ ಮಂಡನೆ, ಜನರೇಟಿವ್ ಎಐ ವಿಷಯದಲ್ಲಿ ಗೋಷ್ಠಿ ನಡೆಯಲಿದೆ.