Advertisement

AI ಸೃಷ್ಟಿ: ವಿಶ್ವದ ಶ್ರೀಮಂತರು ಜಿಮ್‌ನಲ್ಲಿ!

12:01 AM May 08, 2023 | Team Udayavani |

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆಯ ಸಹಾಯದಿಂದ ಜಾಲತಾಣಗಳಲ್ಲಿ ದಿನಕ್ಕೊಂದು ವಿಭಿನ್ನ ಪೋಸ್ಟ್‌ಗಳು ವೈರಲ್‌ ಆಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಇದೀಗ ಈ ಸರದಿ ಕೋಟ್ಯಧಿಪತಿಗಳ ದೇಹ ಪ್ರಕೃ ತಿಯ ಚಿತ್ರಣದ್ದಾಗಿದೆ. ಮುಕೇಶ್‌ ಅಂಬಾನಿ ಯಿಂದ ಹಿಡಿದು ರತನ್‌ ಟಾಟಾವರೆಗೆ ಶ್ರೀಮಂತರು ಜಿಮ್‌ನಲ್ಲಿ ವರ್ಕೌಟ್‌ ಮಾಡುವ ರೀತಿ ಹೇಗಿರುತ್ತದೆ ಎಂಬುದನ್ನು ಎಐ ಮೂಲಕ ಕಲ್ಪಿಸಿಕೊಳ್ಳಲಾಗಿದೆ. ಅದೀಗ ವೈರಲ್‌ ಆಗಿದೆ.

Advertisement

ಅಬು ಸಹೀದ್‌ ಎನ್ನುವ ಇನ್‌ಸ್ಟಾಗ್ರಾಂ ಬಳಕೆ ದಾರರೊಬ್ಬರು ಅಂಬಾನಿ, ರತನ್‌ ಟಾಟಾ, ಜೆಫ್ ಬೆಜೋಸ್‌, ಬಿಲ್‌ಗೇಟ್ಸ್‌, ಎಲಾನ್‌ ಮಸ್ಕ್ ಅವರ ಎಐ ರಚಿತ ವರ್ಕೌಟ್‌ ಚಿತ್ರಗಳನ್ನು ಹಂಚಿ ಕೊಂಡಿದ್ದಾರೆ. ಇದರಲ್ಲಿ ಅಂಬಾನಿ ವರ್ಕೌಟ್‌ ಮಾಡುತ್ತಿದ್ದರೆ, ರತನ್‌ ಟಾಟಾ ಸೈಕ್ಲಿಂಗ್‌ ಹಾಗೂ ಜೆಫ್ ಸಿಕ್ಸ್‌ಪ್ಯಾಕ್‌ ತೋರಿಸುತ್ತಿರುವಂತೆ ಚಿತ್ರಿ ಸಲಾಗಿದೆ. ಥೇಟ್‌ ಆ ಶ್ರೀಮಂತರೇ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾರೆ ಎನ್ನುವಷ್ಟು ನೈಜವಾಗಿ ಚಿತ್ರಿಸಿರುವ ಎಐನ ಚಾಕಚಕ್ಯತೆಗೆ ನೆಟ್ಟಿಗರು ಫಿದಾ ಆಗಿದ್ದು, ಈ ಪೋಸ್ಟ್‌ 1.3 ಸಾವಿರಕ್ಕೂ ಅಧಿಕ ಲೈಕ್‌ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next