Advertisement
ಕೆಜಿಎಫ್ ನ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಅವರು ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಇಂದು ಆರಂಭವಾದ ಮಳೆಗಾಲದ ಅಧಿವೇಶನಕ್ಕೆ ವಿಧಾನಸಭೆಗೆ ಆಗಮಿಸಿದ ಮೊದಲ ಶಾಸಕಿಯಾಗಿ ಕೆಮರಾದಲ್ಲಿ ದಾಖಲಾಗಿದ್ದಾರೆ. ತಿಪಟೂರಿನ ಕಾಂಗ್ರೆಸ್ ಶಾಸಕ ಷಡಕ್ಷರಿ ನಿರ್ಗಮಿಸಿದ ಮೊದಲ ಶಾಸಕರಾಗಿದ್ದಾರೆ.
Related Articles
Advertisement
ಅಧಿಕಾರಿಗಳ ಪ್ರಕಾರ, ಈ ಉಪಕ್ರಮ ಶಾಸಕರ ಹಾಜರಾತಿ ಮತ್ತು ಅಧಿವೇಶನದಲ್ಲಿ ಅವರ ಭಾಗವಹಿಸುವಿಕೆಯನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿದೆ.
ವಿಧಾನಸೌಧಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ, ವಿಧಾನಸೌಧದ ಕಾರ್ಯದರ್ಶಿ, ವಿಧಾನಸೌಧದ ಪಶ್ಚಿಮ ದ್ವಾರದ ಗೇಟ್‌ಗಳನ್ನು ಮೊದಲ ಹಂತದಲ್ಲಿ ನವೀಕರಿಸಲಾಗಿದೆ, ಕಬ್ಬಿಣದ ಗ್ರಿಲ್ಡ್ ಗೇಟ್‌ಗಳನ್ನು ತೆಗೆದು ಕೆತ್ತನೆಯ ದೊಡ್ಡ ರೋಸ್‌ವುಡ್ ಬಾಗಿಲಿನಿಂದ ಬದಲಾಯಿಸಲಾಗಿದೆ. ಇಂದು(ಸೋಮವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಪೀಠಿಕೆ ಇರುವ ಫಲಕದೊಂದಿಗೆ ಉದ್ಘಾಟಿಸಿದರು.
ಸಭಾಧ್ಯಕ್ಷರು ಮಾತನಾಡಿ, ‘ನಮ್ಮ ವಿಧಾನಸೌಧ ಕಟ್ಟಡಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವವಿದೆ. ವಿಧಾನಸೌಧಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು ಮತ್ತು ಪ್ರವಾಸಿಗರು ಬರುತ್ತಾರೆ. ಅದನ್ನು ಒಳಗಿನಿಂದ ಮತ್ತು ಹೊರಗಿಂದ ಉತ್ತಮ ಮತ್ತು ಗೌರವಯುತವಾಗಿ ಕಾಣುವಂತೆ ಮಾಡುವುದು ನಮ್ಮ ಕರ್ತವ್ಯ. ಇದು ಮೊದಲ ಹಂತವಾಗಿದೆ, ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ, ನಾನು ಸದಸ್ಯರ ಸಲಹೆಗಳನ್ನು ಕೇಳುತ್ತೇನೆ’ ಎಂದರು. ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಇತರ ಶಾಸಕರು ಸಭಾಧ್ಯಕ್ಷರನ್ನು ಶ್ಲಾಘಿಸಿದರು.