Advertisement

20 ನಿಮಿಷಕ್ಕೊಂದು ಬುಲೆಟ್‌ ರೈಲು

06:00 AM Mar 31, 2018 | Team Udayavani |

ಅಹಮದಾಬಾದ್‌: ಅಹಮದಾ ಬಾದ್‌-ಮುಂಬಯಿ ಬುಲೆಟ್‌ ಟ್ರೇನ್‌ ಯೋಜನೆಯಡಿ ಮಹತ್ವದ ಹೆಜ್ಜೆಯಿಟ್ಟಿ ರುವ ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೆ ಕಾರ್ಪೊರೇಶನ್‌ ಲಿಮಿಟೆಡ್‌, ದಿನಕ್ಕೆ 35 ರೈಲುಗಳು ಈ ಎರಡೂ ರೈಲ್ವೆ ನಿಲ್ದಾಣಗಳ ಮಧ್ಯೆ ಚಲಿಸುವುದಾಗಿ ಹೇಳಿದೆ.

Advertisement

ಬುಲೆಟ್‌ ರೈಲು ಅಹಮದಾಬಾದ್‌ನ ಸಾಬರಮತಿ ರೈಲ್ವೆ ಸ್ಟೇಷನ್‌ನಿಂದ ಆರಂಭವಾಗಿ, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಕೊನೆಗೊಳ್ಳಲಿದೆ. ಪ್ರಸ್ತುತ ಹಳೆಯ ಮತ್ತು ಹೊಸ ಸಾಬರಮತಿ ರೈಲ್ವೆ ಸ್ಟೇಷನ್‌ ಮಧ್ಯೆ ಇರುವ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಲು ಆರಂಭಿಸಿದೆ. ಈ ಪ್ರದೇಶದಲ್ಲಿ, ಎತ್ತರಿಸಿದ ಸ್ಟೇಷನ್‌ ಅನ್ನು ಬುಲೆಟ್‌ ರೈಲು ಮಾರ್ಗಕ್ಕಾಗಿ ನಿರ್ಮಿಸಲಾಗುತ್ತದೆ. ಸಾಬರಮತಿ ನಿಲ್ದಾಣ ದಿಂದ ಬುಲೆಟ್‌ ರೈಲು ಆರಂಭವಾ ಗಲಿದ್ದು, ಕಾನ್ಪುರ ಎರಡನೇ ನಿಲ್ದಾಣ ವಾಗಿರಲಿದೆ. ಮುಂಬೈನ ಬಾಂದ್ರಾ ಕುರ್ಲಾದಿಂದ ಸಾಬರಮತಿಯವರೆಗೆ 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ.

ರೈಲು ಯಾವುದೇ ನಿಲ್ದಾಣದಲ್ಲಿ ನಿಲ್ಲಿಸದೇ ನೇರವಾಗಿ ಚಲಿಸಿದರೆ 2.07 ಗಂಟೆಯಲ್ಲಿ ಗಮ್ಯವನ್ನು ತಲುಪಬಹುದಾಗಿದ್ದು, ಎಲ್ಲ 12 ನಿಲ್ದಾಣಗಳಲ್ಲಿ ರೈಲು ನಿಂತಲ್ಲಿ ಪ್ರಯಾಣ ಅವಧಿ 2.58 ಗಂಟೆ. ಸದ್ಯ ರೈಲುಗಳು 7 ಗಂಟೆ ತೆಗೆದು ಕೊಳ್ಳುತ್ತಿದ್ದು, ವಿಮಾನದ ಮೂಲಕ ಒಂದು ಗಂಟೆಯಲ್ಲಿ ತಲುಪಬಹುದಾಗಿದೆ.

ಬೆಳಗ್ಗೆ 7 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ 9 ಗಂಟೆಯ ಅವಧಿಯಲ್ಲಿ ಪ್ರತಿ 20 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಉಳಿದ ಸಮಯದಲ್ಲಿ ಗಂಟೆಗೆ 2 ರೈಲು ಸಂಚರಿಸಲಿವೆ. ದಿನವೊಂದಕ್ಕೆ ಒಟ್ಟು 35 ರೈಲುಗಳು ಸಂಚರಿಸಲಿವೆ. ಅಂದರೆ ಒಟ್ಟು 70 ಟ್ರಿಪ್‌. 750 ಪ್ರಯಾಣಿಕರನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿರಲಿದೆ. ಮುಂದಿನ ದಿನಗಳಲ್ಲಿ ಇದನ್ನು 1250ಕ್ಕೆ ಏರಿಸಲಾಗುತ್ತದೆ. ಬುಲೆಟ್‌ ರೈಲು ಗಂಟೆಗೆ ಗರಿಷ್ಠ 350 ಕಿ.ಮೀ ವೇಗ ಹೊಂದಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next