ಅಹ್ಮದಾಬಾದ್: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬುಟೆಲ್ ಟ್ರೈನ್ ಯೋಜನೆಯಲ್ಲಿ ಸೌರಶಕ್ತಿಯನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ರೈಲು ನಿಲ್ದಾಣಗಳಲ್ಲಿ ಮತ್ತು ನೂತನವಾಗಿ ನಿರ್ಮಿಸಲಾಗುವ ಮಾರ್ಗದ ಉದ್ದಕ್ಕೂ ಪ್ರಾಕೃತಿಕವಾಗಿ ದೊರೆಯುವ ಶಕ್ತಿಯನ್ನೇ ಉಪಯೋಗಿಸಲು ಚಿಂತನೆ ನಡೆದಿವೆ.
ವಿಶೇಷವೆಂದರೆ, ಸಾಬರಮತಿ ರೈಲು ನಿಲ್ದಾಣದ ಮೇಲ್ಭಾಗದಲ್ಲಿ ನಿರ್ಮಿಸಲಾಗುವ ಸೌರ ವಿದ್ಯುತ್ ಘಟಕದಲ್ಲಿ ಮಹಾತ್ಮಾ ಗಾಂಧಿಯವರು ಬಳಕೆ ಮಾಡುತ್ತಿದ್ದ ಚರಕದ ವಿನ್ಯಾಸ ಇರಲಿದೆ.
ನಿಲ್ದಾಣ ಹೊರಭಾಗದಿಂದ ನೋಡುವವರಿಗೆ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ನಡೆಸಿದ ಮೆರವಣಿಗೆಯ ಸಂಕೇತ ಕಾಣಿಸಿಕೊಳ್ಳಲಿದೆ. ಅಹ್ಮದಾಬಾದ್-ಮುಂಬೈ ನಡುವಿನ ಕಾಮಗಾರಿ ವಿವಿಧ ಹಂತಗಳಲ್ಲಿದೆ.
ಇದನ್ನೂ ಓದಿ:ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ಧ ರೊಚ್ಚಿಗೆದ್ದ ಶಾಲಾ ವಿದ್ಯಾರ್ಥಿಗಳು
ಗುಜರಾತ್ ಕಡೆಯಿಂದ ಸಾಬರಮತಿಯಿಂದ ಬುಲೆಟ್ ಟ್ರೈನ್ ಶುರುವಾಗಲಿದ್ದು, ರೈಲು ನಿಲ್ದಾಣವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗುತ್ತಿದೆ. ನಿಲ್ದಾಣದ ಮೇಲ್ಭಾಗಕ್ಕೆ ಪೂರ್ತಿಯಾಗಿ ಸೌರ ಫಲಕ ಅಳವಡಿಸಲಾಗುವುದು. ಅಲ್ಲಿ 700 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ.
ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಅತಿ ವೇಗದ ರೈಲು ನಿಗಮ(ಎನ್‌ಎಚ್‌ಎಸ್‌ಆರ್‌ಸಿಎಲ್) ಟೆಂಡರ್ ಕರೆದಿದೆ. ರೆಸ್ಕೋ(ಆರ್‌ಇಎಸ್‌ಸಿಒ) ಮಾಡೆಲ್‌ನಲ್ಲಿ ಸೌರ ವಿದ್ಯುತ್ ಘಟಕ ನಿರ್ಮಿಸಲಾಗುತ್ತದೆ.