Advertisement
ಕೆಲ ತಾಂತ್ರಿಕ ಕಾರಣಗಳಿಂದ ಕಳೆದ ಒಂದು ತಿಂಗಳಿನಿಂದ ನಗರದಿಂದ ಅಹ್ಮದಾಬಾದ್, ಚೆನ್ನೈಗೆ ಸ್ಥಗಿತಗೊಂಡಿದ್ದ ಇಂಡಿಗೋ ವಿಮಾನಯಾನವು ವೇಳೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮೊದಲಿನಂತೆ ಸೆ. 1 ರಿಂದ ಮತ್ತೆ ಕಾರ್ಯಾರಂಭಗೊಳ್ಳುತ್ತಿದೆ. ಆ ಮೂಲಕ ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಬೆಂಗಳೂರು, ಅಹ್ಮದಾಬಾದ್‌ಗೆ ಸಂಚರಿಸುವ ವಿಮಾನಯಾನಿಗಳಿಗೆ ಗಣೇಶೋತ್ಸವದ ಸಂದರ್ಭದಲ್ಲಿ ಸಂತಸದ ಸುದ್ದಿ ಹೊರಹೊಮ್ಮಿದೆ.
Related Articles
Advertisement
ಮಂಗಳವಾರ ಹೊರತುಪಡಿಸಿ ಇನ್ನುಳಿದ ದಿನ ಕೊಚ್ಚಿನ್-ಹುಬ್ಬಳ್ಳಿ (6ಇ 7995) ವಿಮಾನವು ಮಧ್ಯಾಹ್ನ 2:55 ಗಂಟೆಗೆ ಕೊಚ್ಚಿನ್‌ದಿಂದ ಹೊರಟು ಸಂಜೆ 5:25 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7997) ಸಂಜೆ 5:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:30 ಗಂಟೆಗೆ ಗೋವಾ ತಲುಪಲಿದೆ.
ಪ್ರತಿ ಮಂಗಳವಾರ ಕೊಚ್ಚಿನ್-ಹುಬ್ಬಳ್ಳಿ (6ಇ 7995) ಮಧ್ಯಾಹ್ನ 1:40 ಗಂಟೆಗೆ ಕೊಚ್ಚಿನ್‌ದಿಂದ ಹೊರಟು ಸಂಜೆ 4:30 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಗೋವಾ (6ಇ 7997) ಸಂಜೆ 5:30 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 6:35 ಗಂಟೆಗೆ ಗೋವಾ ತಲುಪಲಿದೆ. ಎ320 ಏರ್‌ಬಸ್ ವಿಮಾನವು 180 ಆಸನಗಳ ಸಾಮರ್ಥ್ಯದ್ದು ಹಾಗೂ ಎಟಿಆರ್ ವಿಮಾನವು 74 ಆಸನಗಳ ಸಾಮರ್ಥ್ಯದ್ದಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
8ರಿಂದ ಬೆಳಗಾವಿ- ಬೆಂಗಳೂರು ವಿಮಾನ:
ಇಂಡಿಗೋ ಸಂಸ್ಥೆಯು ಬೆಂಗಳೂರು-ಬೆಳಗಾವಿ ನಡುವೆ ಸೆ. 8 ರಿಂದ ವಿಮಾನಯಾನ ಆರಂಭಿಸಲಿದ್ದು, ಈಗಾಗಲೇ ಆನ್‌ಲೈನ್ ಬುಕ್ಕಿಂಗ್ ಕೂಡ ಆರಂಭಿಸಿದೆ. ಸಂಸ್ಥೆಯ ಬೆಂಗಳೂರು-ಬೆಳಗಾವಿ (6ಇ 7172) ಎಟಿಆರ್ ವಿಮಾನವು ಬೆಳಗ್ಗೆ 11:30 ಗಂಟೆಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12:50 ಗಂಟೆಗೆ ಬೆಳಗಾವಿ ತಲುಪಲಿದೆ. ಬೆಳಗಾವಿ-ಬೆಂಗಳೂರು (6ಇ 7182) ವಿಮಾನವು ಮಧ್ಯಾಹ್ನ 1:10 ಗಂಟೆಗೆ ಬೆಳಗಾವಿಯಿಂದ ಹೊರಟು 2:35 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.
ಹೊಸ ಮಾರ್ಗಗಳಿಗೆ ಪ್ರಸ್ತಾವನೆ:
ಇಂಡಿಗೋ ವಿಮಾನಯಾನ ಸಂಸ್ಥೆಯು ಹುಬ್ಬಳ್ಳಿ-ದೆಹಲಿ, ಹುಬ್ಬಳ್ಳಿ-ಮುಂಬಯಿ ಹಾಗೂ ಬೆಳಗಾವಿ-ಹೈದರಾಬಾದ್ ನಡುವೆ ಹೊಸದಾಗಿ ವಿಮಾನಯಾನ ಆರಂಭಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಈ ಕುರಿತು ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲದೆ ಸಂಬಂಧಪಟ್ಟ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ಕೂಡ ನಡೆಸಿದೆ ಎಂದು ತಿಳಿದುಬಂದಿದೆ.