Advertisement

ಸಾರ್ವಜನಿಕ ರಸ್ತೆ ಸಮೀಪದ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ: ಗುಜರಾತ್

01:33 PM Nov 16, 2021 | Team Udayavani |

ನವದೆಹಲಿ: ಸಾರ್ವಜನಿಕ ರಸ್ತೆಗಳ ಸಮೀಪದಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಿದ ಗುಜರಾತ್ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ (ಎಎಂಸಿ) ಮಂಗಳವಾರ ಆದೇಶ ಹೊರಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಸಾರ್ವಜನಿಕ ರಸ್ತೆ ಸಮೀಪ ಸೇರಿದಂತೆ ಶಾಲಾ, ಕಾಲೇಜು ಮತ್ತು ಧಾರ್ಮಿಕ ಸ್ಥಳಗಳ ನೂರು ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳಲ್ಲಿ ಮಾಂಸಾಹಾರ ಮಾರಾಟ ಮಾಡಲು ಅನುಮತಿ ಇಲ್ಲ ಎಂದು ಅಹಮದಾಬಾದ್ ಮಹಾನಗರ ಪಾಲಿಕೆಯ ನಗರಾಭಿವೃದ್ಧಿ ಸಮಿತಿ ನಿರ್ಧರಿಸಿದೆ ಎಂದು ಎಎಂಸಿ ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವ್ ನಾಗ್ ದಾನಿ ಎಎನ್ ಐಗೆ ತಿಳಿಸಿದ್ದಾರೆ.

ರಸ್ತೆ ಸಮೀಪದ ಸ್ಥಳಗಳಲ್ಲಿ ಮಾಂಸಾಹಾರ ಮಾರಾಟ ಮಾಡುವಂತಿಲ್ಲ ಎಂದು ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಜನರಿಗೆ ಏನು ಬೇಕೋ ಅದನ್ನು ತಿನ್ನಲು ಮುಕ್ತ ಸ್ವಾತಂತ್ರ್ಯ ಇದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ಇದು ಸಸ್ಯಹಾರ ಮತ್ತು ಮಾಂಸಹಾರದ ಪ್ರಶ್ನೆಯಲ್ಲ. ಜನರಿಗೆ ಏನು ಬೇಕೋ ಅದನ್ನು ತಿನ್ನುವ ಮುಕ್ತ ಸ್ವಾತಂತ್ರ್ಯವಿದೆ. ಆದರೆ ರಸ್ತೆ ಸಮೀಪದ ಅಂಗಡಿಗಳಲ್ಲಿ ಮಾರಾಟ ಮಾಡುವ ಮೂಲಕ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗುತ್ತಿದೆ ಎಂದು ಪಟೇಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next