Advertisement

Ahmedabad; ಪಾಕಿಸ್ಥಾನ ತಂಡಕ್ಕೆ ಆತ್ಮೀಯ ಸ್ವಾಗತ

11:50 PM Oct 12, 2023 | Team Udayavani |

ಅಹ್ಮದಾಬಾದ್‌: ಹೈದರಾಬಾ ದ್‌ನಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ ಚೇಸಿಂಗ್‌ ಮಾಡಿದ ಪಾಕಿಸ್ಥಾನ ಕ್ರಿಕೆಟ್‌ ತಂಡಕ್ಕೆ ಅಹ್ಮದಾಬಾದ್‌ನಲ್ಲಿ ಆತ್ಮೀಯ ಸ್ವಾಗತ ಸಿಕ್ಕಿದೆ. ವಿಮಾನದಲ್ಲೂ ಪಾಕ್‌ ತಂಡದ ದಾಖಲೆಯ ಜಯಕ್ಕೆ ಕೇಕ್‌ ನೀಡುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು.

Advertisement

ತಂಡದ ಸದಸ್ಯರು ಅಹ್ಮದಾಬಾದ್‌ಗೆ ಬಂದಿಳಿದಾಗ ಹೊಟೇಲ್‌ ಸಿಬಂದಿ ಬಿಳಿ ಶಲ್ಯ ಹಾಕಿ, ತಲೆ ಮೇಲೆ ಹೂಮಳೆ ಸುರಿಸಿ, ಸಾಂಪ್ರದಾಯಿಕ ನೃತ್ಯ, ಡೋಲುಬಡಿತದೊಂದಿಗೆ ಸ್ವಾಗತಿಸಿ ದರು. ಇದು ಪಾಕಿಸ್ಥಾನ ತಂಡವನ್ನು ಸಂತೋಷಪಡಿಸಿದೆ. ವಿಶ್ವಕಪ್‌ ನಿಮಿತ್ತ ಭಾರತದಲ್ಲಿರುವ ಪಾಕ್‌ ತಂಡಕ್ಕೆ ಎಲ್ಲ ಕಡೆ ಪ್ರೀತಿಪೂರ್ವಕ ಸ್ವಾಗತ ಸಿಗುತ್ತಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಶನಿವಾರ ಇಲ್ಲಿ ಭಾರತ- ಪಾಕ್‌ ನಡುವೆ ಪಂದ್ಯವೊಂದು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next