ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆ ದಿನೇ ದಿನೆ ರಂಗೇರುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಅಖಾಡಕ್ಕಿಳಿದಿದ್ದರೂ, ಆಡಳಿತಾ ರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿಯಿದೆ. ಹಾಗಾಗಿ, ಎರಡೂ ಪಕ್ಷಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ಹಂತಗಳಲ್ಲಿ ಸುಮಾರು 6ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಿದ್ದಾರೆ. ಭಾನುವಾರ ಅವರು, ಬಾರೂಖ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದಾರೆ.
ಈ ಕ್ಷೇತ್ರದೊಂದಿಗೆ ರಾಹುಲ್ ಅವರಿಗೊಂದು ಭಾವುಕ ಸಂಬಂಧವಿದೆ. ಇದು, ಅವರ ತಾತ ಫಿರೋಜ್ ಗಾಂಧಿ ಅವರು ತಮ್ಮ ಬಾಲ್ಯದ ದಿನಗಳನ್ನು ಕಳೆದ ಊರು. ರಾಜಕೀಯವಾಗಿ ಹೇಳುವುದಾದರೆ, ಈ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ವಿಶ್ವಾಸದ ಕ್ಷೇತ್ರ. ಅಲ್ಲದೆ, ಅದು ಗುಜರಾತ್‌ನ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಮೂಲವೂ ಹೌದು. ಹಾಗಾಗಿ, ಈ ಕ್ಷೇತ್ರದಲ್ಲಿ ಭಾನುವಾರ ನಡೆದ ರ್ಯಾಲಿ ರಾಹುಲ್ ಪಾಲಿಗೆ ಹೆಚ್ಚು ಭರವಸೆಯದ್ದಾಗಿತ್ತು.
ಅಹ್ಮದ್ ಪಟೇಲ್ “ಕೈ’ ಅಭ್ಯರ್ಥಿ?:ಇದೇ ವರ್ಷ ಹಲವಾರು ನಾಟಕೀಯ ತಿರುವುಗಳನ್ನು ಪಡೆದಿದ್ದ ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೇಲಾಟದ ಹೊರತಾಗಿಯೂ ತಮ್ಮ ರಾಜ್ಯಸಭಾ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಅಹ್ಮದ್ ಪಟೇಲ್, ಇಂದಿರಾಗಾಂಧಿ ಕಾಲದಿಂದಲೂ ನೆಹರೂ ಕುಟುಂಬ ಆಪ್ತರು. ಹಾಗಾಗಿ, ಈ ಬಾರಿ ಇಲ್ಲಿ ಕಾಂಗ್ರೆಸ್ ಗೆದ್ದರೆ, ಪಟೇಲ್ ಅವರೇ ಸಿಎಂ ಅಭ್ಯರ್ಥಿ ಎಂದು ಹೇಳಲಾಗಿದೆ.
ಗೋವು ಸಾಕಾಣಿಕೆ ಕ್ರಾಂತಿ!: ಗುಜರಾತ್ ಸರ್ಕಾರದ ಗೋ ಸಂರಕ್ಷಣೆಯ ನೀತಿ ನಿಲುವುಗಳು, ಸವಲತ್ತುಗಳು ಅಲ್ಲಿನ ಜುನಾಗಢ ಜಿಲ್ಲೆಯ ಬೇಲಾ ಎಂಬ ಪುಟ್ಟ ಹಳ್ಳಿಯನ್ನು ಗೋಮಯವ ನ್ನಾಗಿಸುತ್ತಿದೆ. ಪ್ರತಿ ಗೋವಿನ ಲಾಲನೆ ಪಾಲನೆಗೆ ವರ್ಷಕ್ಕೆ 8ರಿಂದ 10 ಲಕ್ಷ ರು. ಸಿಗುತ್ತಿರುವುದರಿಂದ ಇಲ್ಲಿನ ಜನ, ತಮ್ಮ ಕೊಟ್ಟಿಗೆಗೆ ಗೋವುಗಳನ್ನು ಕೊಂಡು ತಂದು ಸೇರ್ಪಡೆಗೊಳಿಸುತ್ತಿದ್ದಾರೆ.
ಬಿಜೆಪಿ “ಒನ್‌ಮ್ಯಾನ್ ಶೋ’ ಆಗಬಾರದು: “”ಬಿಜೆಪಿಯು ದೀರ್ಘಕಾಲದವರೆಗೆ ಚಾಲ್ತಿಯಲ್ಲಿ ರಬೇಕಾದರೆ ಅದು ಸದ್ಯಕ್ಕಿರುವ “ಏಕ ವ್ಯಕ್ತಿ ಪ್ರದರ್ಶನ’ ಹಾಗೂ “ದ್ವಿಸದಸ್ಯ ಸೇನೆ’ಯ ನೆರಳುಗಳಿಂದ ಹೊರಬರಬೇಕು” ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕಿವಿಮಾತು ಹೇಳಿದ್ದಾರೆ. ಪಾಟ್ನಾದಲ್ಲಿ ಮಾತನಾಡಿರುವ ಅವರು, “”ಗುಜರಾತ್, ಹಿಮಾ ಚಲ ಪ್ರದೇಶಗಳ ಚುನಾವಣೆ ಯಲ್ಲಿ ವಿರೋಧ ಪಕ್ಷಗಳನ್ನು ಲಘುವಾಗಿ ಪರಿಗಣಿಸಬಾರದು” ಎಂದಿದ್ದಾರೆ.