Advertisement
ಅಂತರಂಗದ ಸುಖ ಹಾಗೂ ಬಹಿರಂಗದ ಸುಖ ಪರಿಶುದ್ಧವಾದ ಹೃದಯ, ಸಂಸ್ಕಾರಯುತ ಅಧ್ಯಾತ್ಮಿಕತೆಯಿಂದ ಕೂಡಿದ ಬದುಕುವ ಶೈಲಿಯನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಆದರ್ಶ ರಾಷ್ಟ್ರ ನಿರ್ಮಾಣ ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರ ಕಾರ್ಯಕ್ಷೇತ್ರವು ಧರ್ಮದ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಎಲ್ಲರೂ ತಮ್ಮ ಆತ್ಮಜ್ಯೋತಿಯನ್ನು ಬೆಳಗುವುದರ ಮೂಲಕ ಸಮಾಜದ ಜ್ಯೋತಿ ಯನ್ನು ಬೆಳಗುವಂತೆ ಮಾಡುವ ಕಾರ್ಯ ನಮ್ಮಿಂದಾಗಬೇಕು. ನಮ್ಮ ಜೀವನದ ದುಃಖದನಾಲ್ಕು ಮುಖಗಳನ್ನು ಸರಿದಾರಿಗೆ ತರುವಂತಹ ಶಕ್ತಿ ಅಧ್ಯಾತ್ಮಕ್ಕಿದೆ. ಅಧುನಿಕತೆಯ ಜೀವನ ಶೈಲಿಗೆ ಅಧ್ಯಾತ್ಮದೊಂದಿಗೆ ಉತ್ತಮ ಸಂಸ್ಕಾರದಸ್ಪರ್ಶವಿರಬೇಕು. ಮನುಷ್ಯ ಜನ್ಮದಲ್ಲಿ ಬಾಳಿದವನು ಬದುಕನ್ನು ಅತ್ಮಜ್ಞಾನದಿಂದ ಸಂಸ್ಕಾರ ಯುತವಾಗಿ ವಿಕಾಸಗೊಳಿಸಬೇಕು. ಆವಾಗ ಬದುಕು ಸುಂದರವಾಗಿ ರೂಪುಗೊಳ್ಳಬಹುದು. ಬದುಕುವ ಕಲೆಯಲ್ಲಿ ಧರ್ಮದ ಪಾಲನೆ ಅತಿಮುಖ್ಯವಾದುದು. ಉತ್ತಮ ಸಂಸ್ಕಾರಯುತ ವಾದ ಜೀವನ ಪದ್ಧತಿ ನಮ್ಮದಾದರೆ ಆತ್ಮಜ್ಯೋತಿಯು ಪ್ರಜ್ವಲಿಸಬಹುದು ಎಂದು ಶ್ರೀಕ್ಷೇತ್ರ ಒಡಿಯೂರಿನ ಪರಮ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.
ಬದುಕು ಸಾರ್ಥಕವಾಗಬಹುದು. ಅದರ ಫಲ ಜನಮಾನಸವನ್ನು ತಲುಪಿದಾಗ ಆತ್ಮತೃಪ್ತಿ ದೊರಕುತ್ತದೆ. ನಮ್ಮ ಯುವ ಪೀಳಿಗೆಗೆ ಒಳ್ಳೆಯ ಸಂಸ್ಕಾರ, ಆಧ್ಯಾತ್ಮಿಕತೆಯೊಂದಿಗೆ ಬದುಕುವ ಕಲೆಯ ಅರಿವನ್ನು ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಶ್ರೀಗಳನ್ನು ಆರತಿ ಬೆಳಗಿ ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಪಾದಪೂಜೆಯನ್ನು ಅಹ್ಮದ್‌ನಗರದ ಭಕ್ತರ ಪರವಾಗಿ ಶ್ರೀ ಗುರುದೇವ ಸೇವಾ ಬಳಗ ಅಹ್ಮದ್‌ನಗರ ಅಧ್ಯಕ್ಷ, ಉದ್ಯಮಿ ವಿಜಯ್ ಹೆಗ್ಡೆ ದಂಪತಿ ನೆರವೇರಿಸಿ ಗುರು ವಂದನೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು. ಅಹ್ಮದ್‌ನಗರ ಶ್ರೀ ಗುರುದೇವ ಸೇವಾ ಬಳಗದ ಪ್ರಮುಖರಾದ ವಿಶ್ವನಾಥ್ ಶೆಟ್ಟಿ ಅವರು ಈ ಕಾರ್ಯಕ್ರಮದ ಆಯೋಜನೆ ಮಾಡುವಲ್ಲಿ ಸಹಕರಿಸಿದರು.
ಅಪಾರ ಸಂಖ್ಯೆಯಲ್ಲಿ ಸೇರಿದ ಗುರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳಿಂದ ಪ್ರಸಾದ ಸ್ವೀಕರಿಸಿದರು.
Related Articles
ದ್ದರು. ಪುಣೆ ಬಳಗದ ಕಾರ್ಯದರ್ಶಿ ಎನ್. ರೋಹಿತ್ ಡಿ. ಶೆಟ್ಟಿ, ಕೋಶಾಧಿಕಾರಿ ರಂಜಿತ್ ಶೆಟ್ಟಿ,ಮಾಜಿ ಅಧ್ಯಕ್ಷರು, ಸಲಹೆಗಾರರಾದ ನಾರಾಯಣ ಕೆ. ಶೆಟ್ಟಿ, ಉಷಾಕುಮಾರ್ ಶೆಟ್ಟಿ, ಬಳಗದ ಪ್ರಮುಖರಾದ ಸುರೇಶ್ ಶೆಟ್ಟಿ, ಅಮಿತ್ ಶೆಟ್ಟಿ ಉಪಸ್ಥಿತರಿದ್ದರು.
Advertisement