Advertisement

ಪಂಚಕುಲದಲ್ಲಿ ಡೇರಾ ಢರ್‌

07:10 AM Aug 25, 2017 | Team Udayavani |

ಹೊಸದಿಲ್ಲಿ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪನ್ನು ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಲಿದೆ. 

Advertisement

ಹರ್ಯಾಣ, ಪಂಜಾಬ್‌ ರಾಜ್ಯಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ರಾಮ್‌ ರಹೀಂ ವಿರುದ್ಧ ತೀರ್ಪು ಪ್ರಕಟವಾದಲ್ಲಿ ಭಾರೀ ಹಿಂಸಾಚಾರ ಆಗುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಎರಡೂ ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೂಕ್ಷ್ಮಪ್ರದೇ ಶಗಳಲ್ಲಿ ಒಟ್ಟಾರೆ 15 ಸಾವಿರ ಅರೆ ಸೇನಾ ಪಡೆಯೋಧರನ್ನು ನಿಯೋಜಿಸಲಾಗಿದೆ.

ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಆರೋಪದಡಿ ಸಿಬಿಐ ವಿಶೇಷ ನ್ಯಾಯಾಲಯ ಹಲವು ವರ್ಷಗಳ ಕಾಲ ರಾಮ್‌ ರಹೀಂ ವಿರುದ್ಧ ವಿಚಾರಣೆ ನಡೆಸಿದೆ. ಶುಕ್ರವಾರ ತೀರ್ಪು ನಿಗದಿಯಾಗಿರುವುದರಿಂದ ಲಕ್ಷಾಂತರ ಸಂಖ್ಯೆ ಯಲ್ಲಿ ಪಂಚ ಕುಲಾದಲ್ಲಿರುವ ಡೇರಾ ಸಚ್ಚಾ ಸೌದಾ ಆಶ್ರಮಕ್ಕೆ ಅನು ಯಾ ಯಿಗಳು ಧಾವಿಸುತ್ತಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದೆ. ಯಾವುದೇ ಸ್ಥಿತಿ ಎದುರಿಸಲು ಎರಡೂ ರಾಜ್ಯಗಳ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಶಾಂತಿ ಕಾಪಾಡಿ -ರಾಮ್‌ ರಹೀಂ ಮನವಿ: ಈ ಹಿನ್ನೆಲೆಯಲ್ಲಿ ಗುರುವಾರ ಟ್ವೀಟ್‌ ಮಾಡಿರುವ ರಾಮ್‌ ರಹೀಂ ಸಿಂಗ್‌, ಶಾಂತಿ ಕಾಪಾಡುವಂತೆ ಅನುಯಾಯಿಗಳಿಗೆ  ಮನವಿ ಮಾಡಿದ್ದಾರೆ. ನಾನು ಕಾನೂನನ್ನು ಗೌರವಿಸಿ ಶುಕ್ರವಾರ ನ್ಯಾಯಾಲಯಕ್ಕೆ ತೆರಳುತ್ತೇನೆ. ದೇವರ ಮೇಲೆ ಪೂರ್ಣ ನಂಬಿಕೆಯಿದೆ. ಪ್ರತಿಯೊಬ್ಬರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ರಾಮ್‌ ರಹೀಂ ಬೆಂಬಲಿಸಿ 3 ಆತ್ಮಹತ್ಯೆ
ಬಾಬಾ ಮೇಲಿನ ಆರೋಪದಿಂದ ಬೇಸತ್ತ ಅವರ ಮೂವರು ಶಿಷ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುದೇವ್‌ ಸಿಂಗ್‌ ಪಂಚಕುಲ ಆಶ್ರಮ ಆವರಣದಲ್ಲೇ 70 ವರ್ಷದ ವೃದ್ಧ ಗುರುದೇವ್‌ ಸಿಂಗ್‌ ನೇಣು ಹಾಕಿಕೊಂಡರೆ, 42 ವರ್ಷದ ಸೂರಜ್‌ ಭಾನ್‌ ಪಂಚಕುಲಾ ನ್ಯಾಯಾಲಯದ ಹೊರಗೆ ತನ್ನ ತಲೆಗೆ ಗುಂಡಿಟ್ಟುಕೊಂಡು ಸಾವನ್ನಪ್ಪಿದ್ದಾನೆ. ವಿನೋದ್‌ ಕುಮಾರ್‌ ಎಂಬ 26ರ ಯುವಕನೂ ಆತ್ಮಹತ್ಯೆ ಮಾಡಿ ಕೊಂಡು ರಾಮ್‌ ರಹೀಂ ಮೇಲಿನ ವಿಚಾರಣೆಯನ್ನು ವಿರೋಧಿಸಿದ್ದಾನೆ. 

Advertisement

ಏನಿದು ಪ್ರಕರಣ?
1999ರಲ್ಲಿ ರಾಮ್‌ ರಹೀಂ ಸಿಂಗ್‌ ರಿಂದ ಇಬ್ಬರು ಸಾಧ್ವಿ ಯರ ಮೇಲೆ ಅತ್ಯಾ ಚಾರ ನಡೆ ದಿದೆ ಎಂಬ ಸುದ್ದಿ ವದಂತಿ ರೂಪ ದಲ್ಲಿ ಹರಿ ದಾ ಡು ತ್ತಿತ್ತು. ಅತ್ಯಾ ಚಾರ ಕುರಿತ ಅನಾಮಿಕ ಪತ್ರಗಳು ಹರಿದಾಡಲಾರಂಭಿಸಿದವು. ಈ ಬಗ್ಗೆ ಪ್ರಕ ರ ಣ ದಾಖ ಲಿ ಸಿ ಕೊಂಡು ತನಿಖೆ ನಡೆ ಸು ವಂತೆ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ 2002ರಲ್ಲಿ ಸಿಬಿ ಐಗೆ ಆದೇ ಶಿ ಸಿತು. ಅಲ್ಲಿಂದ ದೀರ್ಘ‌ಕಾಲ ವಿಚಾ ರಣೆ ನಡೆದಿದೆ. 

ಏನು ಬೇಕಿದ್ದರೂ ಸಂಭವಿಸಬಹುದು
ಎರಡೂ ರಾಜ್ಯದಲ್ಲಿ ತೀರ್ಪಿನ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಂಚಕುಲಾ ಆಸುಪಾಸಿನ ಸ್ಥಳಗಳಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ. 144 ಸೆಕ್ಷನ್‌ ಜಾರಿಗೊಳಿಸಿ ನಿಷೇಧಾಜ್ಞೆ ಹೇರಲಾಗಿದೆ. ಕೆಲವು ಸ್ಥಳಗಳಲ್ಲಿ 2 ದಿನಗಳ ಮಟ್ಟಿಗೆ ಬಸ್‌ ಹಾಗೂ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಶಾಲಾ ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಆಸ್ಪತ್ರೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿರಲು ಸೂಚಿಸಲಾಗಿದೆ. 2 ದಿನಗಳ ಮಟ್ಟಿಗೆ ಮೊಬೈಲ್‌ ಅಂತರ್ಜಾಲ ಸೇವೆಗಳನ್ನು ರದ್ದುಗೊಳಿಸಲು ತಿಳಿಸಲಾಗಿದೆ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳಲ್ಲಿ ವದಂತಿ ಹಬ್ಬಿಸದಂತೆ ಬಿಗಿಯಾದ ಆಜ್ಞೆ ಹೊರಡಿಸಲಾಗಿದೆ. ಇನ್ನೊಂದೆಡೆ, “ಈಗ ಪರಿಸ್ಥಿತಿ ಶಾಂತವಾಗಿರಬಹುದು. ಆದರೆ, ನಮ್ಮ ಗುರುಗಳ ವಿರುದ್ಧವೇನಾದರೂ ತೀರ್ಪು ಬಂದರೆ, ನಾವು 7 ಕೋಟಿ ಮಂದಿ ಬೆಂಬಲಿಗರಿದ್ದೇವೆ. ಆಗ ಏನು ಬೇಕಿದ್ದರೂ ಸಂಭವಿಸಬಹುದು’ ಎಂದು ಪಂಚಕುಲದಲ್ಲಿ ಠಿಕಾಣಿ ಹೂಡಿರುವ ಬೆಂಬಲಿಗರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next