Advertisement

ಸ್ವಾತಂತ್ರ್ಯಕ್ಕೆ ದಿನಗಣನೆ : ಅಮೃತ್ ಸರ್ ಬಳಿ ಸ್ಫೋಟಕಗಳನ್ನಳವಡಿಸಿದ ಟಿಫಿನ್ ಬಾಕ್ಸ್ ಪತ್ತೆ

05:33 PM Aug 09, 2021 | Team Udayavani |

ನವ ದೆಹಲಿ : ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲ ದಿನಗಳು ಇರುವಾಗಲೇ ಪಂಜಾಬ್ ನ ಅಮೃತ್ ಸರ್ ಬಳಿಯ ಹಳ್ಳಿಯೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಅಳವಡಿಸಲಾದ ಟಿಫಿನ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ, ಈ ಟಿಫಿನ್ ಬಾಕ್ಸ್ ಗಳನ್ನು ಡ್ರೋನ್ ಮೂಲಕ  ಇರಿಸಲಾಗಿದೆ.  ಟಿಫಿನ್ ಬಾಕ್ಸ್ ಹೊಂದಿರುವ ಬ್ಯಾಗಿನಿಂದ ಇತರ ಕೆಲವು ಸ್ಫೋಟಕಗಳು ಕೂಡ ಪತ್ತೆಯಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾರ್ಕಳ : ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಹೊರಕ್ಕೆ ಕಳುಹಿಸಿದ ಇಂಧನ ಸಚಿವ

“ನಿನ್ನೆ (ಭಾನುವಾರ) ಅಮೃತಸರ ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ಪತ್ತೆ ಕಾರ್ಯಾಚರಣೆಯನ್ನು ಮಾಡಿದ್ದೇವೆ. ಕೆಲವು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಕಾರ್ಟ್ರಿಡ್ಜ್‌ ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ.

ಎನ್ ಎಸ್ ಜಿ ತಂಡ ಈ ಟಿಫಿನ್ ಬಾಕ್ಸ್ ಗಳನ್ನು ಪರಿಶೀಲಿಸಿದ್ದು, ಸ್ಫೋಟಕ ಸಾಧನಗಳನ್ನು ಪತ್ತೆ ಮಾಡಲಾಗಿದ್ದು, 2-3 ಕಿ. ಜಿ ಆಗುವಷ್ಟು ಆರ್ ಡಿ ಎಕ್ಸ್ ಸ್ಫೋಟಕ ಗಳನ್ನು ಹೊಂದಿದ್ದವರು ಎಂದು ವರದಿ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

ಏತನ್ಮಧ್ಯೆ, ಕೆಲವು ತಿಂಗಳ ಹಿಂದೆ, ಪಂಜಾಬ್‌ ನ ಗುರುದಾಸಪುರ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಮೂಲದ ಡ್ರೋನ್‌ ನಿಂದ ಇರಿಸಲಾಗಿದ್ದ 11 ಹ್ಯಾಂಡ್ ಗ್ರೆನೇಡ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪಾಕಿಸ್ತಾನದಿಂದ ಡ್ರೋನ್‌ ಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಇರಿಸಿದ ಮೊದಲ ಘಟನೆ 2019 ರ ಸೆಪ್ಟೆಂಬರ್‌ ನಲ್ಲಿ ಪಂಜಾಬಿನಲ್ಲಿ ಬೆಳಕಿಗೆ ಬಂದಿತ್ತು. ಪೋಲಿಸ್ ಎಕೆ -47 ರೈಫಲ್‌ ಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್‌ ಗಳು, ನಕಲಿ ಕರೆನ್ಸಿ ಮತ್ತು ಇತರ ವಸ್ತುಗಳನ್ನು ತರ್ನ್ ತರನ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿತ್ತು.

ಇದನ್ನೂ ಓದಿ : ಕಾರ್ಕಳ : ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಹೊರಕ್ಕೆ ಕಳುಹಿಸಿದ ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next