Advertisement

ಆ. 15ಕ್ಕೆ125 ಕಡೆಯಷ್ಟೇ ಇಂದಿರಾ ಕ್ಯಾಂಟೀನ್‌ ಆರಂಭ

06:15 AM Jul 22, 2017 | Team Udayavani |

ಬೆಂಗಳೂರು: ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಆ. 15ರಂದು ಏಕಕಾಲಕ್ಕೆ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಾಗಿ ಘೋಷಿಸಿದ್ದ ಸರಕಾರ ಇದೀಗ ತಾಂತ್ರಿಕ ಕಾರಣ, ವಿವಾದಗಳ ಹಿನ್ನೆಲೆಯಲ್ಲಿ ಆ. 15ಕ್ಕೆ ಕೇವಲ 125 ವಾರ್ಡ್‌ಗಳಲ್ಲಷ್ಟೇ ಕ್ಯಾಂಟೀನ್‌ ಶುರು ಮಾಡುವುದಾಗಿ ಪ್ರಕಟಿಸಿದೆ. ಇದರಿಂದ ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲಿ ಏಕಕಾಲದಲ್ಲಿ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಿ ಅಗ್ಗದ ದರದಲ್ಲಿ ಕಡುಬಡವರಿಗೆ ಊಟ ಉಪಾಹಾರ ಒದಗಿಸುವ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಅಲ್ಪ ಹಿನ್ನಡೆಯಾದಂತಾಗಿದೆ.

Advertisement

ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ ಬೆನ್ನಲ್ಲೇ ಜೂನ್‌ ಮೊದಲ ವಾರ ಇಂದಿರಾ ಕ್ಯಾಂಟೀನ್‌ ಆರಂಭಿಸುವುದಾಗಿ ಹೇಳಿದ್ದರು. ತಾಂತ್ರಿಕ ಸಮಸ್ಯೆ ಎದುರಾದ ಅನಂತರ ಆ.15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಉದ್ಘಾಟಿಸುವ ಘೋಷಣೆ ಮಾಡಲಾಗಿತ್ತು. ಆದರೆ ಈಗ ಎರಡು ಕಂತುಗಳಲ್ಲಿ ಕ್ಯಾಂಟೀನ್‌ ಆರಂಭಿಸಲು ಸರಕಾರ ನಿರ್ಧರಿಸಿದೆ. ಯೋಜನೆ ಜಾರಿ ವಿಳಂಬಕ್ಕೆ ಕೆಲವು ತಾಂತ್ರಿಕ ಅಡಚಣೆಗಳು ಕಾರಣ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಇಂದಿರಾ ಕ್ಯಾಂಟೀನ್‌ ಯೋಜನೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾತನಾಡಿದ ಅವರು, 125 ವಾರ್ಡ್‌ಗಳಲ್ಲಿ ಆ. 15ರಂದು ಇಂದಿರಾ ಕ್ಯಾಂಟೀನ್‌ ಕಾರ್ಯಾರಂಭವಾಗಲಿದ್ದು, ಉಳಿದೆಡೆ ಅ. 2ರಂದು ಕ್ಯಾಂಟೀನ್‌ ಆರಂಭಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next