Advertisement

ಆಗುಂಬೆ ಸಂಚಾರ ಎಂದಿನಂತೆ

01:00 AM Mar 19, 2019 | Team Udayavani |

ಹೆಬ್ರಿ: ವಲಯ ವನ್ಯಜೀವಿ ವಿಭಾಗದವರ ಆಕ್ಷೇಪದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾರ್ಯಕ್ಕೆ ಮತ್ತೂಮ್ಮೆ ಹಿನ್ನಡೆಯಾಗಿದೆ. ಈ ಹಿಂದೆ ಘೋಷಿಸಲಾಗಿದ್ದ ಮಾ. 19ರಿಂದ ಬಂದ್‌ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಎಂದಿನಂತೆ ವಾಹನ ಸಂಚಾರ ಇರಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ.

Advertisement

ಮಾ. 1ರಿಂದ ಘಾಟಿ ಸಂಚಾರ ಬಂದ್‌ ಎಂಬ ಆದೇಶವಿದ್ದರೂ ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಮಾ. 19ರಿಂದ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಮುಂದೆ ಯಾವಾಗ ಕಾಮಗಾರಿ ಆರಂಭಿಸಲಾಗುವುದು ಎಂಬ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ.

ಉಡುಪಿ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ
ಆಗುಂಬೆ ಘಾಟಿ ಸಂಚಾರ ಮುಂದೂಡಿಕೆ ಎಂಬ ವಿಷಯ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಉಡುಪಿ ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿಯವರಲ್ಲಿ ಕೇಳಿದಾಗ ನಮಗೆ ಯಾವುದೇ ಮಾಹಿತಿ ಇಲ್ಲ. ರಾಷ್ಟ್ರೀàಯ ಹೆದ್ದಾರಿ ವಿಭಾಗದವರು ಕೂಡ ಏನೂ ತಿಳಿಸಿಲ್ಲ. ಘಾಟಿ ಬಂದ್‌ ಬಗ್ಗೆ ಈ ಹಿಂದೆ ಸೂಚಿಸಿದಂತೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೂ ಮಾಹಿತಿ ಇಲ್ಲ
ಘಾಟಿಯಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿಯುತ್ತದೆ ಅಥವಾ ಇಲ್ಲ ಎಂಬ ಜನರ ಗೊಂದಲಕ್ಕೆ ಉಡುಪಿ ಎಸ್‌ಪಿ ಅವರಿಂದ ಮಾಹಿತಿ ಬಯಸಿದಾಗ ನಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಅರಣ್ಯ ಇಲಾಖೆ ಆಕ್ಷೇಪ
ಅರಣ್ಯ ಇಲಾಖಾಧಿಕಾರಿಗಳು ಮಾ. 18ರಂದು ದುರಸ್ತಿ ಪ್ರದೇಶವನ್ನು ಪರಿಶೀಲಿಸಿದರು. ಅಲ್ಲಿ ಬೃಹತ್‌ ಮರ ಗಳಿವೆ ಹಾಗೂ ಅನುಮತಿಗಿಂತ ಹೆಚ್ಚಿನ ಪ್ರದೇಶವನ್ನು ರಸ್ತೆಗೆ ಬಳಸಲಾಗುತ್ತಿದೆ. ಮರ ತೆರವಿಗೆ ವಲಯ ಅರಣ್ಯ ವನ್ಯಜೀವಿ ವಿಭಾಗದ ಅನುಮತಿ ಪಡೆಯದ ಕಾರಣ ರಸ್ತೆ ಕಾಮಗಾರಿಗೆ ಬಿಡುವುದಿಲ್ಲ ಎಂದಿದ್ದಾರೆ ಎಂದು ತಿಳಿದುಬಂದಿದೆ.

Advertisement

ರಾಷ್ಟ್ರೀಯ ಹೆದ್ದಾರಿಯವರು ಇನ್ನೂ ಕೆಲಸ ಆರಂಭಿಸಿಲ್ಲ. ಮರಗಳನ್ನು ತೆರವುಗೊಳಿಸುವ ಬಗ್ಗೆ ಡಿಎಫ್‌ಒ ಅವರಲ್ಲಿ ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿಯುವ ವರೆಗೆ ಘಾಟಿ ಸಂಚಾರ ಎಂದಿನಂತೆ ಮುಂದುವರಿಯಲಿದೆ.
ಕೆ. ದಯಾನಂದ, 
– ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next