ಶಿವಮೊಗ್ಗ: ಆಗುಂಬೆ ಘಾಟ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಒಂದು ರಸ್ತೆಯಿಂದ ಪ್ರಪಾತದತ್ತ ಮುಖಮಾಡಿದ ಘಟನೆ ಗುರುವಾರ ನಡೆದಿದೆ. ಟ್ರಕ್ ನ ಮುಂಭಾಗದ ಚಕ್ರಗಳು ರಸ್ತೆಯಿಂದ ಮುಂದೆ ಹೋಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ತಪ್ಪಿದೆ.
ಆಗುಂಬೆ ಘಾಟ್ ನ ಆರು ಹಾಗೂ ಏಳನೆ ತಿರುವಿನ ಮಧ್ಯದಲ್ಲಿ ಈ ಘಟನೆ ನಡೆದಿದೆ. ಶಿವಮೊಗ್ಗ ಕಡೆಯಿಂದ ಭತ್ತವನ್ನು ತುಂಬಿಕೊಂಡು ಟ್ರಕ್ ಮಂಗಳೂರಿನತ್ತ ತೆರಳುತ್ತಿತ್ತು. ಘಟನೆಯಲ್ಲಿ ಟ್ರಕ್ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ
.
ಇದನ್ನೂ ಓದಿ:ದಾಂತೇವಾಡ: ನಕ್ಸಲೀಯರಿಂದ ಎಸ್ ಯುವಿ ಕಾರು ಸ್ಫೋಟ; ಮಹಿಳೆ ಸೇರಿ 12 ಮಂದಿಗೆ ಗಾಯ
ತಿರುವಿನಲ್ಲಿ ನಿಯಂತ್ರಣ ತಪ್ಪಿದ ಟ್ರಕ್ ರಸ್ತೆ ಬಿಟ್ಟು ಮುಂದೆ ಚಲಿಸಿದೆ. ಈ ವೇಳೆ ಪ್ರಪಾತಕ್ಕೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಉಕ್ಕಿನ ತಡೆಗೋಡೆ ಮೇಲೆ ಹತ್ತಿ ನಿಂತಿದೆ. ಅರ್ಧ ಟ್ರಕ್ ಹೆದ್ದಾರಿ ಕಡೆ ಇದ್ದರೆ ಇನ್ನರ್ಧ ಟ್ರಕ್ ಪ್ರಪಾತದ ಕಡೆ ನೇತಾಡುತ್ತಿತ್ತು. ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಟ್ರಕ್ ಪ್ರಪಾತಕ್ಕೆ ಬೀಳುವುದು ತಪ್ಪಿದೆ. ಒಂದು ವೇಳೆ ಟ್ರಕ್ ಪ್ರಪಾತಕ್ಕೆ ಬಿದ್ದಿದ್ದೇ ಆದಲ್ಲಿ ಆಗುಂಬೆ ಘಾಟ್ ನ ಏಳನೇ ತಿರುವಿನಲ್ಲಿ ಬರುತ್ತಿದ್ದ ವಾಹನಗಳ ಮೇಲೆಯೇ ಬೀಳುತ್ತಿತ್ತು. ಉಕ್ಕಿನ ತಡೆಗೋಡೆ ಇದ್ದಿದ್ದರಿಂದಾಗಿ ಭಾರಿ ಅವಘಡ ತಪ್ಪಿದಂತಾಗಿದೆ.
ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ