Advertisement

ಉತ್ತಮ ಮಳೆ: ಕೃಷಿ ಕಾರ್ಯ ಚುರುಕು

02:23 PM Jun 10, 2020 | Suhan S |

ಗದಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಜೂ. 8ರ ವರೆಗೆ 132.0 ಮಿ.ಮೀ ವಾಡಿಕೆಗಿಂತ ಶೇ. 7 (141.0ಮಿ.ಮೀ.)ರಷ್ಟು ಹೆಚ್ಚು ಮಳೆ ಆಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಜೊತೆಗೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ತಿಳಿಸಿದ್ದಾರೆ.

Advertisement

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 2,80,600 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ(ಜೂ. 8) 46,944 ಹೆಕ್ಟೇರ್‌ ಪ್ರದೇಶದಲ್ಲಿ ಅಂದರೆ ಶೇ. 16.77ರಷ್ಟು ವಿವಿಧ ಬೆಳೆಗಳ ಬಿತ್ತನೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಗಳಾದ ಜೋಳ 420, ಮೆಕ್ಕೆಜೋಳ 4,040, ಹೆಸರು 40,660, ಶೇಂಗಾ 3,085, ಸೂರ್ಯಕಾಂತಿ 527 ಹಾಗೂ ಹತ್ತಿ 5,434 ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಉಂಟಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೇಡಿಕೆಯಂತೆ 10 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಈಗಾಗಲೇ ರೈತರಿಗೆ ಅನುಕೂಲವಾಗಲೆಂದು ಜಿಲ್ಲೆಯ 17 ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯ ನಡೆದಿದೆ. ಅವುಗಳ ಮೂಲಕ 2,114 ಕ್ವಿಂಟಲ್‌ ಮತ್ತು ಖಾಸಗಿ ಮಾರಾಟಗಾರರ ಮೂಲಕ 2,178 ಕ್ವಿಂಟಲ್‌ ಸೇರಿ ಒಟ್ಟು 4,292 ಕ್ವಿಂಟಲ್‌ ವಿವಿಧ ರೀತಿಯ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಅದರಂತೆ ಮುಂಗಾರಿಗೆ 41,112 ಮೆಟ್ರಿಕ್‌ ಟನ್‌ ರಾಸಾಯನಿಕ ಗೊಬ್ಬರಗಳ ಬೇಡಿಕೆ ಇದ್ದು, ಮೇ ತಿಂಗಳ ಅಂತ್ಯದವರೆಗೆ 10,910 ಮೆಟ್ರಿಕ್‌ ಟನ್‌ ಬೇಡಿಕೆಗನು ಗುಣವಾಗಿ 16,219 ಮೆಟ್ರಿಕ್‌ ಟನ್‌ ರಸಗೊಬ್ಬರಗಳನ್ನು ದಾಸ್ತಾನು ಮಾಡಲಾಗಿದೆ. ಈಗಾಗಲೇ 1,692 ಮೆಟ್ರಿಕ್‌ ಟನ್‌ ರಸಗೊಬ್ಬರ ಮಾರಾಟವಾಗಿದೆ. 15,057 ಮೆಟ್ರಿಕ್‌ ಟನ್‌ ರಸಗೊಬ್ಬರ ಹಾಗೂ 5,708 ಕ್ವಿಂಟಲ್‌ ಬಿತ್ತನೆ ಬೀಜ ಸಂಗ್ರಹವಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳಿಗೆ ಯಾವುದೇ ಅಭಾವವಿಲ್ಲ. ಈ ಕುರಿತು ರೈತರಲ್ಲಿ ಆತಂಕ ಬೇಡ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next