Advertisement

ತಗ್ಗರ್ಸೆ ಕಂಬಳ ಗದ್ದೆ ಸಾಂಪ್ರದಾಯಿಕ ನಾಟಿ

11:18 PM Jul 02, 2020 | Sriram |

ಬೈಂದೂರು: ತಗ್ಗರ್ಸೆ ಕಂಠದಮನೆ ಕುಟುಂಬಸ್ಥರ ಕಂಬಳ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಗುರುವಾರ ನಡೆಯಿತು.

Advertisement

ಕಂಠದ ಮನೆಯ ಕುಟುಂಬದ ಹಿರಿಯರಾದ ಟಿ. ನಾರಾಯಣ ಹೆಗ್ಡೆ ಮಾರ್ಗದರ್ಶನದಲ್ಲಿ ನೂರಾರು ಮಂದಿ ಕೃಷಿ ಕೈಂಕರ್ಯದಲ್ಲಿ ಪಾಲ್ಗೊಂಡರು. ಸುಮಾರು 5.14 ಎಕರೆ ವಿಸ್ತಿರ್ಣ ದಲ್ಲಿ ಈ ಕಂಬಳಗದ್ದೆಯಿದ್ದು ದೇವರಗದ್ದೆ ಎಂಬ ನಂಬಿಕೆ ಇದೆ.

ಕಂಬಳ ಗದ್ದೆ ಊರಿನ ವಿಶೇಷ
ಹಿಂದೆ ಪ್ರತಿ ಮನೆಯಲ್ಲೂ ಕೃಷಿಕರು ಇರುತ್ತಿದ್ದರು. ಆದರೆ ಈಗ ಕೃಷಿ ಮಾಡುವವರ ಸಂಖ್ಯೆ ಹಾಗೂ ಕೂಲಿಯವರ ಕೊರತೆಯಿಂದ ಬೇಸಾಯ ಮಾಡುವುದು ಕಷ್ಟ. ತಗ್ಗರ್ಸೆ ಕಂಬಳ ಗದ್ದೆಯಲ್ಲಿ ಮಾತ್ರ ಪ್ರತಿವರ್ಷವೂ ಸಾರ್ವಜನಿಕರು ಭಕ್ತಿಯಿಂದ ನಾಟಿ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಈ ಗದ್ದೆಯಲ್ಲಿ ವೀರಗಲ್ಲು ಶಾಸನಗಳು ಇದ್ದು, ಅತ್ಯಂತ ಪುರಾತನವಾಗಿರುವುದಕ್ಕೆ ಸಾಕ್ಷಿಯಾಗಿವೆ.

ಸಂಪೂರ್ಣ ಗದ್ದೆಯನ್ನು ಒಂದೇ ದಿನದಲ್ಲಿ ನಾಟಿ ಮಾಡಬೇಕೆಂಬ ಸಂಪ್ರದಾಯವಿದ್ದು, ಇಂದಿಗೂ ಕೂಡ ಅದನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಈ ಸಂದರ್ಭ ಜಿ.ಪಂ. ಸದಸ್ಯ ಬಾಬು ಶೆಟ್ಟಿ, ಗ್ರಾ.ಪಂ. ಸದಸ್ಯ ಬಾಲಕೃಷ್ಣ ಹೆಗ್ಡೆ ಕಂಠದಮನೆ, ಸುಭಾಶ್ಚಂದ್ರ ಶೆಟ್ಟಿ ಕಂಠದಮನೆ, ವೆಂಕಟ ಪೂಜಾರಿ ಸಸಿಹಿತ್ಲು, ರಾಜು ಹುದಾರ್‌ ಉಪಸ್ಥಿತರಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next