Advertisement

ಸಂಬಂಧಿಕರು ಕೈ ಬಿಟ್ರೂ ಲಕ್ಷ್ಮವ್ವನ ಕೈ ಬಿಡಲಿಲ್ಲ ಕೃಷಿ!

06:28 PM Oct 20, 2020 | Suhan S |

ಲಿಂಗಸುಗೂರು: ಇಂದು ಹೊಲ ಗಳಿದ್ದರೂ ಮಾಡುವವರೇ ಇಲ್ಲ. ಕೃಷಿ ಕಾರ್ಯಕ್ಕೆ ಯಾರೂ ಸಿಗುವುದೇ ಇಲ್ಲ. ಇಂತಹದ್ದರಲ್ಲಿ ತಾಲೂಕಿನ ಗುಂಡಸಾಗರಗ್ರಾಮದ ಮಹಿಳೆಯೊಬ್ಬಳುಗಂಡಸರನ್ನೂ ಮೀರಿಸುವಂತೆ ಕೃಷಿ ಕೆಲಸದಲ್ಲಿ ತೊಡಗಿದ್ದಾಳೆ.

Advertisement

ಗುಂಡಸಾಗರ ಗ್ರಾಮದ ಲಕ್ಷ್ಮವ್ವಎಂಬುವಳೇ ಆ ದಿಟ್ಟ ಮಹಿಳೆ. ಈ ಮಹಿಳೆ ಪುರುಷರು ಹುಬ್ಬೇರಿಸುವಂತೆ ಕೃಷಿ ಕಾರ್ಯದಲ್ಲಿ ನಿರತರಾಗುತ್ತಾಳೆ. ಗಂಡನ ಮನೆಯವರು ಇವಳನ್ನು ಮನೆಯಿಂದಹೊರ ಹಾಕಿದ್ದರು. ಇವರ ಅಣ್ಣಂದಿರು ಕೂಡಾ ಆಸರೆ ನೀಡದಿರುವುದು ಚಿಂತೆಗೀಡಾಗುವಂತಾಗಿತ್ತು. ಆದರೆ ತಾಯಿ ಆಸರೆಯಲ್ಲಿ ಬದುಕು ಸಾಗಿಸುತ್ತಿರುವ ಈಕೆ ತನ್ನ ತಾಯಿಹೆಸರಿನಲ್ಲಿರುವ ಎರಡು ಎಕರೆ ಭೂಮಿಯಲ್ಲಿ ಯಾರೊಬ್ಬರ ಸಹಕಾರ ಇಲ್ಲದೇ ಸ್ವತಃ ಕೃಷಿಗೆ ನಿಂತಿದ್ದಾಳೆ. ಕೃಷಿ ಕಾರ್ಯಗಳಾದ ಮಡಿಕೆ, ಕುಂಟೆ, ಎಡೆ, ಬಿತ್ತನೆ, ರಾಶಿ ಮಾಡುವ ಲಕ್ಷ್ಮವ್ವ ಪುರುಷಗಿಂತ ತಾ ಏನೂ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.

ನನ್ನ ಮಗಳ ಸಂಸಾರ ಹಾಳಾಗಿತ್ತು. ಮಗಳ ಕಷ್ಟ ನೋಡಲಾಗದೇ ನಾನೇ ಮಗಳನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಈಗ ಗಂಡಸರನ್ನು ಮೀರಿಸುವಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಳೆ. ಸರ್ಕಾರ ಇಲ್ಲವೇ ಬೇರೆಯವರಿಂದ ಯಾವುದೇ ನೆರವಿಲ್ಲದೇ ಬದುಕು ಕಟ್ಟಿಕೊಂಡಿದ್ದಾಳೆಂದು ಹೆಮ್ಮೆಯಿಂದ ಹೇಳುತ್ತಾರೆ ಲಕ್ಷ್ಮವ್ವಳ ತಾಯಿ ಅಮರಮ್ಮ.

ನಾನು ಚಿಕ್ಕಂದಿನಿಂದ ಕೃಷಿ ಚಟುವಟಿಕೆ ಮಾಡುತ್ತ ಬಂದಿದ್ದೇನೆ. ನನ್ನ ಗಂಡ ಮತ್ತು ನನ್ನಅಣ್ಣಂದಿರು ನನ್ನನ್ನು ಮನೆಯಿಂದ ಹೊರ ಹಾಕಿದರೂ ತಾಯಿ ಆಸರೆ ಸಿಕ್ತು. ಅವಳ ಆಶ್ರಯದಲ್ಲೇ ಕೃಷಿಯಲ್ಲಿ ನೆಮ್ಮದಿ ಬದುಕು ಸಾಗಿಸುತ್ತಿದ್ದೇನೆ. ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ. -ಲಕ್ಷ್ಮವ್ವ, ರೈತ ಮಹಿಳೆ

Advertisement

Udayavani is now on Telegram. Click here to join our channel and stay updated with the latest news.

Next