ಮಂಡ್ಯ: ನಗರದ ತಾಲೂಕು ಕೃಷಿ ಕಚೇರಿ ಮುಂಭಾಗ ಜಿಪಂ, ತಾಪಂ ಹಾಗೂ ಕೃಷಿ ಇಲಾಖೆ ವತಿಯಿಂದ ನಡೆದ ಕೃಷಿ ಮತ್ತು ಕೃಷಿ ಸಂಬಂ ಧಿಸಿದಇತರೆ ಇಲಾಖೆಗಳ 2022-23ನೇ ಸಾಲಿನ ಕೃಷಿಅಭಿಯಾನ ರಥಕ್ಕೆ ಶಾಸಕ ಎಂ.ಶ್ರೀನಿವಾಸ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ಕೃಷಿ ಅಭಿಯಾನ ವಾಹನಕ್ಕೆ ಪ್ರತಿವರ್ಷದಂತೆ ಈ ವರ್ಷವೂ ಚಾಲನೆ ನೀಡಲಾಗಿದೆ. ರೈತರಿಗೆ ಪ್ರತಿ ಎಕರೆಗೆಡೀಸೆಲ್‌ಗಾಗಿ 250 ರೂ. ನೀಡುವ ಯೋಜನೆ ಬಹಳ ಒಳ್ಳೆಯ ಯೋಜನೆ ಎಂದರು.
ಸರ್ಕಾರದಿಂದ ಸೋಲಾರ್ ನೀಡುವ ಯೋಜನೆ ಹಾಗೂ ಅನೇಕ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಆಯೋಜಿಸಿರುವಕಾರ್ಯಕ್ರಮವನ್ನು ಎಲ್ಲಾ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಪಂ ಸಿಇಒ ಶಾಂತಾ ಎಂ.ಹುಲ್ಮನಿ ಮಾತನಾಡಿ, ಜಿಲ್ಲೆಯ ವಿವಿಧ ಇಲಾಖೆಗಳಿಂದ ರೈತರಿಗೆ ಸಂಬಂಧಿಸಿದಂತೆ ಸೌಲಭ್ಯಗಳ ಕುರಿತು ಮಾಹಿತಿಯ ನೀಡುವಂಥ ಕೃಷಿ ಅಭಿಯಾನ ರಥ ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ಸಂಚರಿಸಿ ರೈತರಿಗೆ ಎಲ್ಲ ಮಾಹಿತಿನೀಡಿ, ರೈತರಿಗೆ ಸೌಲಭ್ಯ ಪಡೆದುಕೊಳ್ಳಲು ಸಹಕರಿಸಬೇಕು ಎಂದರು.
ಕೃಷಿ ಇಲಾಖೆ ಜಂಟಿನಿರ್ದೇಶಕ ವಿ.ಎಸ್.ಅಶೋಕ್, ಉಪನಿರ್ದೇಶಕಿ ಮಾಲತಿ, ಸಹಾಯಕ ನಿರ್ದೇಶಕಿ ಜಿ.ಟಿ.ಸೌಮ್ಯಾ, ಜಿಪಂ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಎಂ.ಸಿ.ಪುಷ್ಪಲತಾ ಮತ್ತಿತರರಿದ್ದರು.