Advertisement

ಕಿಸಾನ್‌ ಡ್ರೋನ್‌ಗಾಗಿ 5 ಲಕ್ಷ ರೂ. ನೆರವು

01:29 AM May 03, 2022 | Team Udayavani |

ದೇಶದ ಪ್ರತಿ ಹಳ್ಳಿಯಲ್ಲಿ ರೈತರು ಕೈಗೊಳ್ಳುವ ಕೃಷಿ ಚಟುವಟಿಕೆಗಳಲ್ಲಿ ಡ್ರೋನ್‌ ಬಳಕೆಗೆ ಅನುಕೂಲ ಕಲ್ಪಿಸಲು ಕೇಂದ್ರ ಸರಕಾರ ಮುಂದಾಗಿದೆ. ಪ್ರತಿ ಡ್ರೋನ್‌ ಖರೀದಿಗೆ 5 ಲಕ್ಷ ರೂ.ಗಳ ಅನುದಾನ ನೀಡಲು ಕೇಂದ್ರ ಮುಂದಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಸೋಮವಾರ ಹೊಸದಿಲ್ಲಿಯಲ್ಲಿ ಕೃಷಿ ಕ್ಷೇತ್ರಕ್ಕೆ ಡ್ರೋನ್‌ ನೀಡುವ ಯೋಜನೆ ಉದ್ಘಾಟಿಸಿದರು.

Advertisement

ಅನುಕೂಲಗಳೇನು?
ಇಳುವರಿಯನ್ನು ನಿಖರವಾಗಿ ಲೆಕ್ಕಹಾಕಲು, ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು, ಹೊಲಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲು ಸಹಾಯ.
ರೈತರ ಸಮಯ, ಕೃಷಿ ಚಟುವಟಿಕೆಗಳ ಮೇಲಾಗುವ ಖರ್ಚು ಉಳಿತಾಯ.
ಬೆಳೆಗಳ ಮೇಲೆ ನಡೆಯುವ ಮಿಡತೆಗಳ ದಾಳಿ ನಿಗ್ರಹಿಸಲು ಅನುಕೂಲ.

ಖರೀದಿ ಹೇಗೆ?
ಹಳ್ಳಿಯಲ್ಲಿರುವ ರೈತರ ಸಹಕಾರಿ ಸಂಘಗಳು, ರೈತರ ಜತೆಗೆ ನಂಟು ಹೊಂದಿರುವ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳಿಗೆ ಕಸ್ಟಮ್‌ ಹೈರಿಂಗ್‌ ಸೆಂಟರ್‌ಗಳ (ಸಿಎಚ್‌ಸಿ) ಮೂಲಕ ಡ್ರೋನ್‌ ಖರೀದಿಸಿ ಅವುಗಳನ್ನು ರೈತರಿಗಾಗಿ ಬಳಸಬೇಕಿದೆ. ಈ ಸಂಘ-ಸಂಸ್ಥೆಗಳು ಖರೀದಿಸುವ ಡ್ರೋನ್‌ಗಳ ಬೆಲೆಯಲ್ಲಿ ಶೇ. 40ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ.ಗಳವರೆಗೆ ವಿನಾಯಿತಿ ಸಿಗಲಿದೆ. ಕೃಷಿ ಪದವಿಧರರು ಗ್ರಾಮೀಣ ಮಟ್ಟದಲ್ಲಿ ಸಿಎಚ್‌ಸಿಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಅವರಿಗೆ5 ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next