Advertisement
ಮಕ್ಕಳಿಗೆ ಕೃಷಿ ಒಲವು ಮೂಡಿಸುವ ನಿಟ್ಟಿನಲ್ಲಿ ಸಾಣೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮಕ್ಕಳಿಂದ ನಾಟಿ ಕಾರ್ಯ ನಡೆಯಿತು. ಶಾಲೆಯ ಇಕೋ ಕ್ಲಬ್‌ನ ಸುಮಾರು 80 ವಿದ್ಯಾರ್ಥಿಗಳು ಜು. 13ರಂದು ಮುರತ್ತಂಗಡಿ ಸಾಧು ಭಂಡಾರಿಯವರ ಗದ್ದೆಯಲ್ಲಿ ನಾಟಿ ಮಾಡಿದರು. ಇಕೋ ಕ್ಲಬ್ ಉಪಾಧ್ಯಕ್ಷ ಅಫÅನ್ ನೇತೃತ್ವದಲ್ಲಿ ಒಂದೂವರೆ ಎಕರೆ ಗದ್ದೆಯಲ್ಲಿ ನಾಟಿ ನಡೆಯಿತು.
ಮುರತ್ತಂಗಡಿ ಸಾಧು ಭಂಡಾರಿಯವರು ಕಳೆದ ಹಲವಾರು ವರ್ಷಗಳಿಂದ ಕೆಲಸಗಾರರು ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸಾಯ ಮಾಡದೆ ಒಂದೂವರೆ ಎಕರೆ ಗದ್ದೆಯನ್ನು ಹಡೀಲು ಬಿಟ್ಟಿದ್ದರು. ಇದೀಗ ಅಬೂಬಕ್ಕರ್ ಸಾಣೂರು ಅವರ ಮನವಿ ಮೇರೆಗೆ ತನ್ನ ಗದ್ದೆಯನ್ನು ನೇಜಿ ನಾಟಿಗೆ ನೀಡಿದ್ದಾರೆ. ಅಬೂಬಕ್ಕರ್ ಅವರು ಈ ಗದ್ದೆಯನ್ನು ಹದಮಾಡಿ ಬೇಸಾಯಕ್ಕೆ ಸಿದ್ಧಗೊಳಿಸಿದ್ದಾರೆ. ಹಡೀಲು ಬಿದ್ದ ಭೂಮಿಯಲ್ಲಿ ಕೃಷಿ ಮಾಡುವ ಹವ್ಯಾಸವನ್ನು ಇವರು ಹೊಂದಿದ್ದಾರೆ. ಸಾಣೂರು ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ತಾವೂ ಮಕ್ಕಳೊಂದಿಗೆ ಗದ್ದೆಗಿಳಿದು ಮಕ್ಕಳಿಗೆ ನೇಜಿ ನಾಟಿ ಕುರಿತು ಮಾಹಿತಿ ನೀಡಿದರು. ಪ್ರಗತಿ ಪರ ಕೃಷಿಕ ನವೀನ್ ಚಂದ್ರ ಜೈನ್, ಅಬ್ದುಲ್ ಲತೀಫ್ ಅವರು ಕೂಡ ಮಾರ್ಗದರ್ಶನ ಮಾಡಿದರು. ಶಿಕ್ಷಕಿ ಲವೀನಾ ಮೆಲ್ವಿಟಾ ನೊರೋನ್ಹಾ, ಸಹಶಿಕ್ಷಕರಾದ ಗಿರೀಶ್ ಕುಮಾರ್, ಜಾನ್ ವಾಲ್ಟರ್, ವೃಂದಾ ಪಿ.ಎಸ್. ಸಹಕರಿಸಿದರು.
Related Articles
ಸಾಧು ಭಂಡಾರಿಯವರು ತಮ್ಮ ಗದ್ದೆಯನ್ನು ಬೇಸಾಯಕ್ಕೆ ನೀಡಿದ್ದಾರೆ. ವಕೀಲ ಅನಿಲ್ ಹೆಗ್ಡೆ ಎಂ4 ಸಸಿಯನ್ನು ನಾಟಿಗಾಗಿ ಉಚಿತವಾಗಿ ನೀಡಿದ್ದಾರೆ. ಸಂಪೂರ್ಣ ಸಾವಯವ ಮಾದರಿಯಲ್ಲೇ ಭತ್ತ ಬೇಸಾಯ ಮಾಡಲಾಗುವುದು. ಬೆಳೆದ ಭತ್ತವನ್ನು ಅಕ್ಕಿ ಮಾಡಿ ಶಾಲೆಗೆ ನೀಡಲಾಗುವುದು.
-ಅಬೂಬಕ್ಕರ್ ಸಾಣೂರು, ಕೃಷಿಕರು
Advertisement
ಹೆಚ್ಚು ಪ್ರಸ್ತುತಬೇಸಾಯದ ಕುರಿತು ಮಕ್ಕಳು ಅಭಿರುಚಿ ಹೊಂದಬೇಕೆನ್ನುವ ನಿಟ್ಟಿನಲ್ಲಿ ನೇಜಿ ನಾಟಿಯಂತಹ ಕಾರ್ಯ ಮಾಡುವುದು ಹೆಚ್ಚು ಪ್ರಸ್ತುತ ಹಾಗೂ ಉಪಯುಕ್ತ. ಇದರಿಂದ ವಿದ್ಯಾರ್ಥಿಗಳಿಗೆ ಅನ್ನದ ಅರಿವು ಮೂಡುವುದರೊಂದಿಗೆ ರೈತನ ಶ್ರಮದ ಕುರಿತು ತಿಳಿಯುತ್ತದೆ.
-ಬಾಬು ಪೂಜಾರಿ, ಮುಖ್ಯ ಶಿಕ್ಷಕರು