ಬೈಂದೂರು ವಲಯದ ಹಕ್ಲಾಡಿ ಗ್ರಾಮದ ಯಳೂರು-ತೊಪುÉವಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಲ್ಲಿ ಎಳವೆಯಲ್ಲೇ ಪ್ರಕೃತಿ ಬಗ್ಗೆ ಪ್ರೀತಿ ಬೆಳೆಯುವಂತೆ ಮಾಡಲಾಗುತ್ತಿದ್ದು ಆ ಮೂಲಕ ಇತರ ಶಾಲೆಗಳಿಗೂ ಮಾದರಿಯಾಗುತ್ತಿದ್ದಾರೆ.
Advertisement
ಸಾವಯವ ಗೊಬ್ಬರದಿಂದ ಪ್ರಕೃತಿಗಾಗುವ ಲಾಭ, ರಾಸಾಯನಿಕ ಗೊಬ್ಬರಗಳಿಂದಾಗುವ ಅಪಾಯ ಸೇರಿದಂತೆ ಇನ್ನೂ ಅನೇಕ ಕೃಷಿ ಸಂಬಂಧಿ ವಿಚಾರಗಳ ಬಗ್ಗೆ ಮಕ್ಕಳಿಗೆ ಜ್ಞಾನ ದೊರೆಯುತ್ತಿದೆ.
ತೆಂಗು, ಬಸಳೆ, ತೊಂಡೆ, ಬೆಂಡೆ, ಬದನೆ, ಪಪ್ಪಾಯಿ, ಕಬ್ಬು, ಅಲಸಂಡೆ, ಪಡುವಲಕಾಯಿ, ಹೀರೆಕಾಯಿ ಇತ್ಯಾದಿ ತರಕಾರಿ ಗಿಡಗಳನ್ನು ನೆಡಲಾಗಿದೆ. ಮಕ್ಕಳೇ ಪ್ರತಿನಿತ್ಯ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆೆ. ಮಕ್ಕಳಿಗೆ ಔಷಧ ಸಸ್ಯಗಳ ಕುರಿತು ಮಾಹಿತಿ ಇಲ್ಲದಿರುವುದನ್ನು ಮನಗಂಡು, ಅವುಗಳನ್ನೂ ಬೆಳೆಸಲಾಗುತ್ತಿದೆ. ಅಲ್ಲದೆ ಅವುಗಳ ಪ್ರಯೋಜನಗಳೇನು ಎನ್ನುವುದರ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
Related Articles
Advertisement
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ, ಸದಸ್ಯರು ಮತ್ತು ಪೋಷಕರು ಕೈ ತೋಟ ನಿರ್ಮಿಸುವಲ್ಲಿ ಕೈಜೋಡಿಸುತ್ತಿದ್ದಾರೆ.
ಕೃಷಿಯ ಅರಿವುಕೇವಲ ವಿದ್ಯೆಯೊಂದಿದ್ದರೆ ಸಾಲದು. ನಮ್ಮ ಸುತ್ತಮುತ್ತ ನಡೆಯುವ ಕೃಷಿ ಚಟುವಟಿಕೆಗಳ ಅರಿವು ಮಕ್ಕಳಿಗೆ
ಇರಬೇಕು ಎನ್ನುವ ನಿಟ್ಟಿನಲ್ಲಿ ಕೃಷಿ ಬಗೆಗಿನ ಕಾಳಜಿ, ಅವುಗಳ ಬಳಕೆ, ಸಾವಯವ ಗೊಬ್ಬರದಿಂದ
ಸಿಗುವ ಲಾಭ, ರಾಸಾಯನಿಕ ಗೊಬ್ಬರದಿಂದ ಆಗುವ ದುಷ್ಪರಿಣಾಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಗುತ್ತಿದೆ. ಮಕ್ಕಳು ಇದರಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳುತ್ತಿದ್ದಾರೆ.
– ಶಶಿಧರ ಶೆಟ್ಟಿ ಸಾಲ್‌ಗದ್ದೆ, ಮುಖ್ಯ ಶಿಕ್ಷಕರು